ದಿನಾಂಕ:16/12/25 ರಂದು ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ-75 ಗುಲಗಳಲೆ(ರಾಟೆಮನೆ) ಸಮೀಪ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಸರಕು ತುಂಬಿದ್ದ ಕಂಟೈನರ್ ಲಾರಿಯು ಚಾಲಕನ ಅಜಾಗರೂಕತೆಯಿಂದ ರಸ್ತೆಯಿಂದ ಆಚೆಗೆ ಪಲ್ಟಿ ಹೊಡೆದು ಅಪಘಾತವಾಗಿದ್ದು ಯಾವುದೇ ರೀತಿಯ ಪ್ರಾಣಾಪಾಯ ಆಗಿರುವುದಿಲ್ಲ.
ಮಲೆನಾಡಿನಲ್ಲಿ ಅತಿಯಾದ ಇಬ್ಬನಿ ಬೀಳುತ್ತಿದ್ದು ರಾತ್ರಿ ವೇಳೆ ರಸ್ತೆ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ವಾಹನ ಸವಾರರು ರಾತ್ರಿವೇಳೆ ಸಂಚರಿಸುವಾಗ ಜಾಗರೂಕತೆಯಿಂದ ನಿಧಾನವಾಗಿ ಸಂಚರಿಸಬೇಕೆಂದು ಮನವಿ ಮಾಡಲಾಗಿದೆ.
