ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಯಡೇಹಳ್ಳಿ ಆರ್ ಮಂಜುನಾಥ್ ರವರು, ಹಾಗೂ ಕಾಡಾನೆ ಸಂರಕ್ಷಣಾ ಸಮಿತಿ ಅಧ್ಯಕ್ಷರಾದಂತಹ ಹುರುಡಿ ವಿಕ್ರಂ ರವರು, ಮತ್ತು ಕಾಫಿ ಬೆಳೆಗಾರ ಸಂಘಟನೆಯ ಬೆಕ್ಕನಹಳ್ಳಿ ನಾಗರಾಜ್ ರವರನ್ನು ಒಳಗೊಂಡು ಇನ್ನಿತರ 16 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಲೆನಾಡು ರಕ್ಷಣಾ ಸೇನೆ ತಿಳಿಸಿದ್ದು ಕೇಸನ್ನು ಹಿಂದಕ್ಕೆ ಪಡೆಯುವಂತೆ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಿದೆ
ಮಲೆನಾಡು ರಕ್ಷಣಾ ಸೇನೆಯ ಗೌರವಾಧ್ಯಕ್ಷರಾದ ಎಡೆಹಳ್ಳಿ ಆರ್ ಮಂಜುನಾಥ್ ರವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾಡಾನೆ ಮಾನವ ಸಂಘರ್ಷದ ವಿರುದ್ಧ ಹೋರಾಟ ಮಾಡಿ ಅಧ್ಯಯನ ನಡೆಸಿ, ವರದಿ ತಯಾರಿಸಿ ಸರ್ಕಾರಕ್ಕೆ ಮಂಡಿಸಿದ ಹೋರಾಟಗಾರರಾಗಿದ್ದಾರೆ.
ಇವರ ಪೂರ್ವಪರ ಹೋರಾಟಗಳನ್ನು ಅವಲೋಕನ ಮಾಡದೆ ಇವರ ವಿರುದ್ಧ ಪ್ರಕರಣ ದಾಖಲಿಸಿರುವುದು ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಎರಡು ವರ್ಷದ ಹಿಂದೆ ನಡೆದ ಅರ್ಜುನನ ಸಾವಿಗೆ ನ್ಯಾಯ ಕೇಳಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದು ಇದು ಸಾಂಸ್ಕೃತಿಕ ರಾಯಭಾರಿ ಅರ್ಜುನನಿಗೂ ಕೂಡ ಮಾಡಿದ ದ್ರೋಹವಾಗಿದೆ. ಸರ್ಕಾರ ಗಂಭೀರವಾದ ಚಿಂತನೆಯನ್ನು ನಡೆಸಿ ಈ ಕೂಡಲೇ 19 ಜನರು ವಿರುದ್ಧದ ಪ್ರಕರಣವನ್ನು
ಸರ್ಕಾರ ಹಿಂಪಡೆದು ಹೋರಾಟಗಾರರಿಗೆ ನ್ಯಾಯ ಒದಗಿಸಬೇಕು,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ.ಸಾಗರ್ ಜಾನೇಕೆರೆಯವರು ತಿಳಿಸಿದರು.
ಈ ಸಂಧರ್ಭದಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ,ತಾ•ರೈತ ಘಟಕದ ಅಧ್ಯಕ್ಷರಾದ ಪ್ರಸನ್ನ,ಸನಾಗೇಂದ್ರ,ರುತೇಶ್,ತೇಜೇಶ್,
ವಿನಯ್,ಯೋಗೇಶ್,ಗಿರೀಶ್ ಹಾಗೂ ಪದಾಧಿಕಾರಿಗಳು ಇದ್ದರು.
