ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಸರ್ಕಾರಿ ಶಾಲೆ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಬಾಗೆ ಶಾಲಯ ವಿದ್ಯಾರ್ಥಿನಿ ಭಾವನ ವಹಿಸಿದು ಬಹಳ ವಿಶೇಷವಾಗಿತ್ತು . ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಖಾ ಗೋಪಿನಾಥ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ದಿನೇದಿನೇ ಕಮ್ಮಿ ಆಗುತ್ತಿದ್ದು ಇದರ ಬಗ್ಗೆ ಪೋಷಕರು ಗಮನ ಹರಿಸಬೇಕು ಸರ್ಕಾರ ಸರ್ಕಾರಿ ಮಕ್ಕಳಿಗೆ ಉಚಿತ ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದು ಅದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಪೋಷಕರು ಹೆಚ್ಚಿನದಾಗಿ ಕಳಿಸುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗ ತೊಡಗಿದೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಗಿರೀಶ್ ಅವರು ಮಾತನಾಡಿ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಂದಲಾದರೂ ಸಮಸ್ಯೆ ಉಂಟಾದರೆ ಗ್ರಾಮ ಪಂಚಾಯಿತಿಗೆ ದೂರು ನೀಡಬಹುದು ಅಥವಾ ನಿಮ್ಮ ಗ್ರಾಮದ ಸದಸ್ಯರುಗಳಿಗೆ ಮಾಹಿತಿ ನೀಡಬಹುದು ಇಲ್ಲವಾದರೆ 1098 ಕೆ ಕರೆ ಮಾಡಿ ತಮ್ಮ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವ್ಯಾಪ್ತಿಯ ಪುಟಾಣಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು ಈ ವೇಳೆ ಮಕ್ಕಳಿಗಾಗಿಯೇ ಹಲವಾರು ಕ್ರೀಡಾಕೂಟಗಳನ್ನು ಪಂಚಾಯತಿಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಗೆದ್ದಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಮೂಲಕ ಪ್ರಶಸ್ತಿ ನೀಡಲಾಯಿತು.
ಪಂಚಾಯತಿ ಅನುದಾನದಲ್ಲಿ ಕಾಕನಮನೆ ಶಾಲೆ ಮತ್ತು ದಿವಾನ್ ಎಸ್ಟೇಟ್ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಪಂಚಾಯಿತಿ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರೇಖಾ ಗೋಪಿನಾಥ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ , ಕಾರ್ಯದರ್ಶಿ ಜಯಪ್ರಕಾಶ್ , ಉಪಾಧ್ಯಕ್ಷರಾದ ರಮೇಶ್ ,ಸದಸ್ಯರುಗಳಾದ ಜೈ ಶಂಕರ್ , ರಾಕೇಶ್ , ಸತೀಶ್, ಚಾರ್ಲ್ಸ್ , ವನಜಾಕ್ಷಿ , ಶ್ರೀನಿವಾಸ್, ಪುಷ್ಪ , ಮೋಹಿನಿ, ಗಿರಿಜಮ್ಮ, ಸವಿತಾ ಜಗದೀಶ್,
ವೀರಭದ್ರ , ಶಾಲಾ ಶಿಕ್ಷಕರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು .

