ಆಲೂರುವಿನ ತಾಲ್ಲೂಕು ಕಚೇರಿಗೆ ಇಂದು ಬಾಂಬ್ ಇಟ್ಟಿದ್ದೇವೆ ವ್ಯಕ್ತಿಯೊಬ್ಬರು ಇ ಮೇಲ್ ಮೂಲಕ ಬೆದರಿಕೆ ಹಾಕಿರುವ ಘಟನೆ ಇಂದು ಸೋಮವಾರ ನಡೆದಿದೆ.
ಈ ಘಟನೆ ಆಲೂರು ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇಂದು ಬೆಳಿಗ್ಗೆ ತಾಲೂಕು ಕಚೇರಿಯ ಇ ಮೇಲ್ ಗೆ
ರಮೇಶ್ ಎಂಬ ಹೆಸರಿನಲ್ಲಿ ಪತ್ವನ್ನು ರವಾನೆ ಮಾಡಲಾಗಿತ್ತು.
ಈ ಅಧಿಕೃತ ಇಮೇಲ್ ಗೆ ಎರಡು ಆರ್ ಡಿ ಎಕ್ಸ್ ಬಾಂಬ್ ಇಟ್ಟಿದ್ದು ಅದನ್ನು ಮಧ್ಯಾಹ್ನ 1:00 ಒಳಗೆ ಉಡಾಯಿಸಲಾಗುವುದು ಎಂಬ ಸಂದೇಶ ಆಗಿತ್ತು
ಇಂದು ಬೆಳಿಗ್ಗೆ ಎಂದಿನಂತೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಈ ಮೇಲ್ಗಳನ್ನ ಪರೀಕ್ಷೆ ಮಾಡಲು ಮುಂದಾದಾಗ ಈ ಮೇಲ್ ಬಂದಿರುವುದನ್ನು ಗಮನಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ
ಬಳಿಕ ಎಲ್ಲಾ ಸಿಬ್ಬಂದಿಗಳನ್ನು ಕೂಡ ತಾಲೂಕು ಕಚೇರಿಯಿಂದ ಹೊರ ಕಳುಹಿಸಲಾಯಿತು.
ತಕ್ಷಣವೇ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಅವರು ಆಲೂರು ಪೊಲೀಸರಿಗೆ ವಿಷಯ ತಿಳಿಸಿದರು.
ಬಳಿಕ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಸಂಪೂರ್ಣ ಕಟ್ಟಡದ ಸುದೀರ್ಘ ತಪಾಸಣೆ ನಡೆಸಿದರು. ಆದರೆ ಪರಿಶೀಲನೆ ವೇಳೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ಸಾರ್ವಜನಿಕರಲ್ಲಿ ಆತಂಕ
ತಾಲ್ಲೂಕು ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಅನಾಮ ದೇಯ ಬೆದರಿಕೆ ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಮಾಡಿತು.
ಬಾಂಬ್ ಇಡಲಾಗಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ವೇಗವಾಗಿ ಹರಡಿದ ಹಿನ್ನೆಲೆಯಲ್ಲಿ, ತಾಲ್ಲೂಕು ಕಚೇರಿ ಸುತ್ತಮುತ್ತ ಹಾಗೂ ರಸ್ತೆ ಬದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ನಿಂತು ವೀಕ್ಷಿಸುವಂತಾಯಿತು. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸಿ ಹೋಗುವವರೆಗೂ ಪಟ್ಟಣದಲ್ಲಿ ಆತಂಕದ ವಾತಾವರಣ ಮುಂದುವರಿದಿತ್ತು.
ತಪಾಸಣೆ ಪೂರ್ಣಗೊಂಡ ಬಳಿಕ ತಹಸೀಲ್ದಾರ್ ಮಲ್ಲಿಕಾರ್ಜುನ ಅವರು ತಾಲ್ಲೂಕು ಕಚೇರಿಯೊಳಗೆ ತೆರಳಿ ಪರಿಶೀಲನೆ ನಡೆಸಿ, ಸಿಬ್ಬಂದಿಗಳು ಆತಂಕವಿಲ್ಲದೆ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದರು. ಇದರಿಂದ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟು ತಮ್ಮ ಕೆಲಸ ಆರಂಭಿಸಿದರು.
ಮಾಹಿತಿ ತಿಳಿದ ತಕ್ಷಣ ತಾಲ್ಲೂಕು ಕಚೇರಿಗೆ ಶಾಸಕ ಸಿಮೆಂಟ್ ಮಂಜು ಅವರು ಭೇಟಿ ನೀಡಿ, ತಹಸೀಲ್ದಾರ್ ಹಾಗೂ ಪೊಲೀಸ್
ಡಿ.15ರಂದು ಡಿಸಿ ಕಚೇರಿಗೂ ಹುಸಿ ಬಾಂಬ್ ಬೆದರಿಕೆ
ಮುನ್ನ ಇದೇ ತಿಂಗಳ 15ರಂದು ಹಾಸನ ಜಿಲ್ಲಾಧಿಕಾರಿಗಳ ಕಚೇರಿಗೂ ಬಾಂಬ್ ಇರುವ ಬಗ್ಗೆ ಸುಳ್ಳು ಬೆದರಿಕೆ ಸಂದೇಶ ಬಂದಿದ್ದು, ಆ ಸಂದರ್ಭದಲ್ಲೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದ ನಂತರ ಅದು ಹುಸಿ ಬೆದರಿಕೆ ಎಂಬುದು ತಿಳಿದುಬಂದಿತ್ತು. ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು, ಸಾಕಷ್ಟು ಸಂಖ್ಯೆಯ ನೌಕರರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಇಂತಹ
ಬೆದರಿಕೆ ಸಂದೇಶಗಳು ಆತಂಕ ಸೃಷ್ಟಿಸುತ್ತಿವೆ. ಹುಸಿ ಬಾಂಬ್ ಬೆದರಿಕೆ ನೀಡುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ನಂತರ ಕಚೇರಿ ಆವರಣವನ್ನು ವೀಕ್ಷಿಸಿದ ಅವರು, ಈ ಕುರಿತು ಮಾತನಾಡಿ, “ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬರುತ್ತಿರುವುದು ಗಂಭೀರ ವಿಷಯ. ಇಂತಹ ಚೆಲ್ಲಾಟದಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ಪ್ರಾಣಸಂಕಟದ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರ ತಕ್ಷಣವೇ ಇದಕ್ಕೆ
ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
ಆಲೂರು ತಾಲ್ಲೂಕು ಕಚೇರಿಯಲ್ಲಿ ಯಾವುದೇ ಸ್ಪೋಟಕ ವಸ್ತುಗಳಿಲ್ಲ ಎಂಬುದು ಸ್ಪಷ್ಟವಾಗಿದ್ದು, ಈಗ ಎಲ್ಲಾ ಸಿಬ್ಬಂದಿಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಂತರ ತಹ ಸಿಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ ನಮ್ಮ ಅಧಿಕೃತ ಮೇಲಗೆ ಬೆಳಗಿನ ಜಾವ ಈ ಸಂದೇಶ ಬಂದಿದ್ದು ನಮ್ಮ ಸಿಬ್ಬಂದಿಗಳು ನಮಗೆ ತಿಳಿದ ತಕ್ಷಣ ಸಂಬಂಧಪಟ್ಟ ಪೊಲೀಸ್ ಸರ ಗಮನಕ್ಕೆ ತಂದು ಎಲ್ಲಾ ಪರಿಶೀಲನೆ ನಡೆಸಲಾಗಿದೆ ಇದು ಒಂದು ಹುಸಿಬಾಂಬಾಗಿದೆ ಈ ಹಿಂದೆ ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ರಾಜ್ಯದ ಹಲವು ಕಚೇರಿಗಳ ಇದು ಕೂಡ ಇದೇ ರೀತಿ ಸಂದೇಶ ಬಂದಿದೆ ಎಂದರು.
ಈ ಸಂದೇಶದಲ್ಲಿ ತಮಿಳುನಾಡಿನ ಡಿಐಜಿ ಸೇರಿದಂತೆ ಇನ್ನಿತರರಿಗೂ ಕೂಡ ಇದು ವರ್ಗಾವಣೆ ಆಗಿದೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೂಡ ಆಲೂರು ಎಂಬ ತಾಲೂಕು ಇದ್ದು ಅಲ್ಲಿಯ ಮಾಹಿತಿ ನೀಡಲಾಗುವುದು ಈಗ ಯಾವುದೇ ಭಯವಿಲ್ಲದೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಕಲೇಶಪುರ ಡಿವೈಎಸ್ಪಿ, ಆಲೂರು ವೃತ ನಿರೀಕ್ಷಕ ಮೋಹನ್ ರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.



