ವರದಿ :ನಾಗೇಶ್ ಎಂ ಎಚ್ ಮಾಗೇರಿ.
ಸರಗಳ್ಳತನ
ಪ್ರಕರಣ ಬೇದಿಸುವಲ್ಲಿ ಯಶಸ್ವಿ ಯಾದ ಯಶಳೂರು ಪೊಲೀಸ್.
ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ ಮಾಗೇರಿ ಸಮೀಪ ಕಲ್ಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ನಡೆದು 54 ಗಂಟೆಯೊಳಗೆ
ಆರೋಪಿಯನ್ನು ಬಂದಿಸುವಲ್ಲಿ
ಯಶಳೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಲೀಮ್ ಸರ್ ಮತ್ತು ಇಲಾಖೆ ಸಿಬ್ಬಂದಿ ವರ್ಗದವರು ಯಶಸ್ವಿಯಾಗಿದ್ದಾರೆ
ಘಟನೆ
ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ
ಮಾಗೇರಿ ಸಮೀಪ ಕಲ್ಲಹಳ್ಳಿ ಗ್ರಾಮದ
ನಂದೀಶ್ ರವರ ತಾಯಿ ಪಾರ್ವತಮ್ಮ ಮನೆಯ ಹತ್ತಿರ ಇರುವ ರಸ್ತೆಯಲ್ಲಿ ಹೋಗುವಾಗ ಬೈಕಿನಲ್ಲಿ ಬಂದ ಬೈಕ್ ಸವಾರ ಇವರ ಕುತ್ತಿಗೆಯಲ್ಲಿ ಇದ್ದ 35 ಗ್ರಾಂ ಇರುವ ಮಾಂಗಲ್ಯ ಸರವನ್ನು ಕಿತ್ತು ಕೊಂಡು ಹೋಗಿದ್ದರು
ಯಶಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಸರವೇಗದಲ್ಲಿ ಕಾರ್ಯಾಚರಣೆ
ನಡೆಸಿದ ಪೊಲೀಸ್ ಇಲಾಖೆ ಯವರು 54 ಗಂಟೆಗೆ ಯೊಳಗೆ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ
ಆರೋಪಿಯನ್ನು ಸ್ಥಳ ಮಾಹಜರಿಗೆ ಕರೆದುಕೊಂಡ ಬಂದ ಸಂದರ್ಭದಲ್ಲಿ ಕಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಲೀಮ್ ಸರ್ ಮತ್ತು
ಸಿಬ್ಬಂದಿ ವರ್ಗದವರಿಗೆ ಗ್ರಾಮದ ಪರವಾಗಿ ಅಭಿನಂದನೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಾತನಾಡಿ
ಜನರಿಗೆ ಸೈಬರ್ ಕ್ರೈ ಮತ್ತು
ಹಳ್ಳಿಗಳಲ್ಲಿ ನಡೆಯುತ್ತಿರುವ ದರೋಡೆ ಅತ್ಯಾಚಾರ ಬಾಲ್ಯ ವಿವಾಹದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು
ಪ್ರತಿ ಮನೆಯಲ್ಲಿ ಸಿಸಿ ಕ್ಯಾಮೆರಾ
ಅಳವಡಿಸಿಕೊಂಡರೆ ಉತ್ತಮ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮಂತ್ ಕುಮಾರ್ ರವರು ಶೀಘ್ರದಲ್ಲಿ ಸರ್ಕಲ್ ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದರು.



