ಆಲೂರು ಶೆಟ್ಟಿಹಳ್ಳಿ ಆಶಾ ಕಿರಣ ವೃದ್ಧಾಶ್ರಮ ದಲ್ಲಿರುವ ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ವೃದ್ಧರು ಹಾಗೂ ಮಕ್ಕಳ ಸೇರಿ 40 ಜನರಿದ್ದು ಊರಿನ ಗಣ್ಯರು ಜನಜಾಗೃತಿ ಪದಾಧಿಕಾರಿಗಳು ಒಕ್ಕೂಟದವರು ಸೇರಿದ್ದು
ಭಾಗವಹಿಸಿದ ಗಣ್ಯರು ಪೂಜ್ಯರ ಸಮಾಜ ಸೇವೆಗಳನ್ನು ಕೊಂಡಾಡಿ ಮುಂದಕ್ಕೆ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವಂತ ಶಕ್ತಿ ಭಗವಂತ ಅವರಿಗೆ ಕರುಣಿಸಲೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆಲೂರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಕೆ ರತ್ನಾಕರ್ ಕೊಟ್ಟಾರಿ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಧರ್ಮರಾಜ್, ರಾಜಶೇಖರ್ ಮೋಹನ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಂಜು,ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಶೇಖರ್, ವಲಯದ ಮೇಲ್ವಿಚಾರಕರಾದ ನವೀನ್ ಹಾಗೂ ಕೃಷಿ ಮೇಲ್ವಿಚಾರಕರಾದ ವಿಘ್ನೇಶ್, ಸೇವಾ ಪ್ರತಿನಿಧಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು
