ಚಂಗಡಿಹಳ್ಳಿ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ.
ದಿನಾಂಕ 25.11.25ರಂದು ಚoಗಡಿಹಳ್ಳಿ ಕ್ಲಸ್ಟರ್ ಹಂತದ 25-26ನೇ ಸಾಲಿನ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಚಂಗಡಿಹಳ್ಳಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಂಗಡಿಹಳ್ಳಿ ಕ್ಲಸ್ಟರ್ನ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 14 ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂಗಡಿಹಳ್ಳಿ ಶಾಲೆಯ ಎಸ್. ಡಿ .ಎಂ. ಸಿ. ಅಧ್ಯಕ್ಷರಾದ ಶ್ರೀಯುತ ಆನಂದ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಂಗಡಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಜಗನ್ನಾಥ್ ರವರು ಭಾಗವಹಿಸಿದ್ದರು.ಜೊತೆಗೆ ಸಕಲೇಶಪುರ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಶ್ರೀಯುತ ತಮ್ಮಣ್ಣ ಶೆಟ್ಟಿ ,ಹಾಗೂ ಖಜಾಂಚಿಗಳಾದ ಶ್ರೀಯುತ ಜಗದೀಶ್ ರವರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ವೈಡಿ ಶಿವಕುಮಾರ್, ಚಾಂಗಡಿಹಳ್ಳಿ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮೋಹನ್ ಬಿ.ಎಂ, ಚಂಗಡಿಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ರಾಣಿ ಸಿ.ಟಿ., ಸಹ ಶಿಕ್ಷಕರು, ಚಂಗಡಿಹಳ್ಳಿ ಕ್ಲಸ್ಟರ್ನ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ,ಅತಿಥಿ ಶಿಕ್ಷಕರುಗಳು, ತೀರ್ಪುಗಾರರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಛದ್ಮಾವೇಶ ಮಿಮಿಕ್ರಿ ಆಶುಭಾಷಣ ಅಭಿನಯ ಗೀತೆ,ಪ್ರಬಂಧ ರಚನೆ,ಕಾವ್ಯವಾಚನ, ಮಣ್ಣಿನ ಮಾದರಿ, ಚಿತ್ರಕಲೆ, ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ, ಹೀಗೆ ಹತ್ತು ಹಲವು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಸರಳವಾಗಿ,ಸುಂದರವಾಗಿ ಮೂಡಿಬಂದಿತು.
ಮುಖ್ಯ ಅಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿದ್ದ ಶ್ರೀಯುತ ಆನಂದ್ ರವರು ಬಹುಮಾನಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾದ ಶ್ರೀಯುತ ಜಗನ್ನಾಥ್ ರವರು ಮಕ್ಕಳ ಪ್ರತಿಭೆಯನ್ನು ತುಂಬಕಂಠದಿಂದ ಶ್ಲಾಘಿಸಿದರು. ಅಂತಿಮವಾಗಿ ಸಮಾರೋಪ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.


