ಕುನಿಗನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ತಾರರನ್ನು ಆಯ್ಕೆ ಮಾಡಲಾಗಿದೆ.
ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
3 ತಿಂಗಳಲ್ಲಿ 3 ಬಾರಿ ಬದಲಾವಣೆ
ಕಳೆದ 3 ತಿಂಗಳಲ್ಲಿ 2 ಬಾರಿ ಅಧ್ಯಕ್ಷರ ಬದಲಾವಣೆ ಆಗಿ 3 ನೇ ಬಾರಿಗೆ ಅಧ್ಯಕ್ಷರು ಆಯ್ಕೆ ಆಗಿರುವುದು ಅಚ್ಚರಿ ಮೂಡಿಸಿದೆ.
2025 ನೇ ಸಾಲಿನ ಫೆಬ್ರವರಿ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಪ್ರಕಾಶ್ ಅಕ್ಟೋಬರ್ ತಿಂಗಳಲ್ಲಿ ರವಿಕುಮಾರ್, ನವೆಂಬರ್ ತಿಂಗಳಲ್ಲಿ ತಾರಾ ಮಹೇಶ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
2025ನೇ ಸಾಲಿನಲ್ಲಿ 3 ಮಂದಿ ಅಧ್ಯಕ್ಷರು ಈ ಗ್ರಾಮ ಪಂಚಾಯತ್ ನಲ್ಲಿ ಬದಲಾವಣೆ ಆಗಿದ್ದಾರೆ.
ಇವರಲ್ಲಿ ಪ್ರಕಾಶ್ ಮಾತ್ರ 8 ತಿಂಗಳು ಅಧ್ಯಕ್ಷರಾಗಿದ್ದರೆ ರವಿಕುಮಾರ್ ರಿಗೆ 1 ತಿಂಗಳಷ್ಟು ಮಾತ್ರ ಅಧ್ಯಕ್ಷ ಆಗುವ ಯೋಗ ಭಾಗ್ಯ ಒದಗಿದೆ
