*ಹಾನುಬಾಳು ಕ್ಲಸ್ಟರ್ ಮತ್ತು ರಕ್ಷಿದಿ ಕ್ಲಸ್ಟರ್ ಪ್ರತಿಭಾ ಕಾರಂಜಿ:- 2025-26*
ಇಂದು ಕರ್ನಾಟಕ ಪಬ್ಲಿಕ್ ಶಾಲೆ ಹಾನುಬಾಳು ಇಲ್ಲಿ ಹಾನುಬಾಳು ಕ್ಲಸ್ಟರ್ ಹಾಗೂ ರಕ್ಷಿದಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಸದರಿ ಕಾರ್ಯಕ್ರಮದಲ್ಲಿ
ಸಕಲೇಶಪುರದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಭಾಗವಹಿಸಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು ಮತ್ತು ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ಹಾನುಬಾಳು ಪಂಚಾಯಿತಿ ಅಧ್ಯಕ್ಷರಾದ ಸಂತೋಷ್, ಪಿಡಿಒ ಹರೀಶ್,ಕ್ಯಾಮನಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಮಲ್ಲೇಶ್,ದೇವಾಲದಕೆರೆ ಪಂಚಾಯತಿ ಉಪಾಧ್ಯಕ್ಷರಾದ ರವೀಂದ್ರ, ಬಿ ಆರ್ ಸಿ ಗಂಗಾಧರ್ ಹಾನುಬಾಳು ಕೆ ಪಿ ಎಸ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಚಂದ್ರಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅರುಣ್ ಉಪಸ್ಥಿತರಿದ್ದರು.
CRP ಜಗದೀಶ್ , ಹಾಗೂ 2 ಕ್ಲಸ್ಟರ್ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು,ಪೋಷಕರು ಭಾಗವಹಿಸಿದ್ದರು.


