ಸಕಲೇಶಪುರ :- ಹೆತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ದಿನಾಂಕ: -20 -11 -2025 ನೇ ಗುರುವಾರರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಣಬನಹಳ್ಳಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರತೀಶ್ ರವರು ಉದ್ಘಾಟನೆ ಮಾಡಿದರು. ಬಿಆರ್ ಪಿ ಶೋಭಾ ಸಿ.ಡಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗ್ರಾಮದ ಹಿರಿಯರಾದ ತಮ್ಮೆಗೌಡರವರು “ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತೆಗೆಯಲು ಸಹಕಾರಿಯಾಗಿದೆ.”ಎಂದು ತಿಳಿಸಿದರು.
ಹೆತ್ತೂರು ಕ್ಲಸ್ಟರ್ ನ 13 ಶಾಲೆಗಳಿಂದ ಸುಮಾರು 100 ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
ವಿದ್ಯಾರ್ಥಿಗಳು ಛದ್ಮವೇಷ, ಚಿತ್ರಕಲೆ, ದೇಶಭಕ್ತಿ ಗೀತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿ ಬಹುಮಾನಗಳನ್ನು ಪಡೆದು ತಾಲ್ಲೂಕು ಹಂತಕ್ಕೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕೊಣಬನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಕುಮಾರಸ್ವಾಮಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಲಲಿತ, ಬಡ್ತಿ ಮಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ವಿವಿಧ ಶಾಲೆಗಳಿಂದ ಶಿಕ್ಷಕರು, ಮಕ್ಕಳು,ಎಸ್ ಡಿ ಎಂ ಸಿ ಸದಸ್ಯರು,ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.


