ಸಕಲೇಶಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಪ್ರತಿಯೊಬ್ಬರಿಗೂ ಭೂಮಿ, ವಸತಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರಕಾರಗಳ ಕರ್ತವ್ಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶುಕ್ರವಾರ ತಾಲ್ಲೂಕು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತ್ತಿಗಲ್ ನಿಂದ ಅರಕೆರೆ ಬಿ.ಬಿ ಶಿವಪ್ಪ ಸರ್ಕಲ್ ವರೆಗೆ 54 ಲಕ್ಷ ರೂ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ನಗರದ ಸಮೀಪ ಇರುವ ಅರೆಕೆರೆ ಗ್ರಾಮ ಕುಗ್ರಾಮವಾಗಿದ್ದು ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ.
ಗ್ರಾಮದ ರಸ್ತೆ ,ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ಗೆ ಪ್ರಮುಖ ಅಧ್ಯತೆ ನೀಡಲಾಗುವುದು.ಸರಕಾರದ ಮೂಲಕ ಅನುದಾನ ತಂದು ಎಲ್ಲಾನಾಗರಿಕರಿಗೂ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಸರಕಾರದಿಂದ ಬಂದ ಸಣ್ಣಪುಟ್ಟ ಅನುದಾನದಲ್ಲಿಕ್ಷೇತ್ರದ ಹೆಚ್ಚು ಅವಶ್ಯಕವಾಗಿರುವ ರಸ್ತೆಗಳ ಪಟ್ಟಿ ಮಾಡಿ ಯಾವುದೇ ತಾರತಮ್ಯ ಮಾಡದೇ ಅಭಿವೃದ್ಧಿಪಡಿಸಲಾಗುತ್ತಿದೆ.
ಸಮಾಜ ಕಲ್ಯಾಣ ಇಲಾಖೆ ಎಸ್ ಇಪಿ, ಟಿಎಸ್ ಪಿ ಅನುದಾನದಲ್ಲಿತಾಲೂಕಿನಾದ್ಯಂತ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು.ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವಂತೆ ತಿಳಿಸಲಾಗಿದೆ. ಯಾವುದೇ ಹಂತದಲ್ಲೂಕಾಮಗಾರಿಯ ಗುಣಮಟ್ಟದ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು,’’ಎಂದರು.
ಬಿಜೆಪಿ ಮುಖಂಡ ಎ.ವಿ ನರೇಶ್ ಮಾತನಾಡಿ, ಈ ಭಾಗದಲ್ಲಿ ಅಂದಿನ ಶಾಸಕರಾದ ಬಿಬಿ ಶಿವಪ್ಪನವರ ಕಂಡಿತ್ತು. ತದನಂತರ ಬಂದಂತಹ ಯಾವುದೇ ಜನಪ್ರತಿನಿಧಿಗಳು ಮೂಲ ಸೌಕರ್ಯ ಒದಗಿಸಲು ಇಚ್ಛಾಶಕ್ತಿ ಹೊಂದಿರಲಿಲ್ಲ ಹಾಗಾಗಿ ಈ ಗ್ರಾಮ ನಗರದಿಂದ ಕೂದಲಳೆ ಅಂತರದಲ್ಲಿದ್ದರೂ ಅಭಿವೃದ್ಧಿ ಕಾಣದೆ ಕುಗ್ರಾಮದಂತಿತ್ತು. ಇದೀಗ ಶಾಸಕ ಸಿಮೆಂಟ್ ಮಂಜು ಅವರ ಸರಳ ಸಜ್ಜನಿಕೆ ವ್ಯಕ್ತಿತ್ವ ಹಾಗೂ ಜನರಿಗೆ ಮೂಲ ಸೌಕರ್ಯ ಒದಗಿಸಬೇಕೆಂಬ ಬದ್ಧತೆಯಿಂದ ಬ್ಯಾಕರವಳ್ಳಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗನಾಥ್, ಅರೆಕೆರೆ ಗ್ರಾಪಂ ಸದಸ್ಯ ನಂದೀಶ್, ಸರಿತಾ, ಮಾಜಿ ತಾ.ಪಂ ರುಕ್ಮಿಣಿ, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕಾರ್ತಿಕ್,ಬಿಜೆಪಿ ಬೂತ್ ಅಧ್ಯಕ್ಷ ಚಿರಂತ್, ,ಕಸಬಾ ಹೋ. ಬೆಳಗಾರರ ಸಂಘದ ನಿರ್ದೇಶಕ ಪ್ರಸನ್ನ, ಬ್ಯಾಕರವಳ್ಳಿ ಗ್ರಾ.ಪಂ ವ್ಯಾಪ್ತಿಯ ಬೆಳಗಾರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮುಖಂಡರಾದ ದಿನೇಶ್,ಅರೆಕೆರೆ ಇಂದನ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
