ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ ತಾ॥ಘಟಕದ ವತಿಯಿಂದ ಬಾಗೆಯ ರಾಮನಗರ ಘಟಕ ಹಾಗೂ ಆಟೋ ಮಾಲೀಕರು ಮತ್ತು ಚಾಲಕರ ಘಟಕದ ಉಧ್ಘಾಟನೆ
~~~~~~~~~~~~~~~~~~~~~~~~~~
ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ॥ ಸಾಗರ್ ಜಾನೇಕೆರೆಯವರ ಅಧ್ಯಕ್ಷತೆಯಲ್ಲಿ ಬಾಗೆಯ ಶ್ರೀರಾಮನಗರದ ಘಟಕ ಉಧ್ಘಾಟನೆಯಾಯಿತು.
ಈ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿಯವರು ನೂತನ ಘಟಕವನ್ನು ಉಧ್ಘಾಟಿಸಿದರು.
,ಘಟಕದ ಅಧ್ಯಕ್ಷರಾಗಿ ಉಮೇಶ್ ರವರನ್ನು ಗೌರವಾಧ್ಯಕ್ಷರಾಗಿ ಮನುರವರನ್ನು ಹಾಗೂ ಘಟಕದ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ ಪ್ರತಾಪ್ರವರನ್ನು ಆಯ್ಕೆ ಮಾಡಿ ಕನ್ನಡ ಭಾವುಟ ನೀಡುವುದರೊಂದಿಗೆ ಸಂಘಟನೆಯ ಜವಾಬ್ದಾರಿ ನೀಡಿದರು.
ಈ ಸಂಧರ್ಭದಲ್ಲಿ ನೂರಾರು ಯುವಕರು ಮಲೆನಾಡು ರಕ್ಷಣಾ ಸೇನೆಯ ಕಾರ್ಯವನ್ನು ಮೆಚ್ಚಿ ಸಂಘಟನೆಗೆ ಸೇರ್ಪಡೆಯಾದರು..
ಸ್ಥಳೀಯ ಮುಖಂಡರಾದ ರಾಕೇಶ್ ,ಗೋಪಿನಾಥ್ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಪಟೇಲ್,ತಾಲ್ಲೂಕು ಘಟಕದ ರುತೇಶ್,ತೇಜೇಶ್, ಚಂದ್ರಶೇಖರ್,ತಾಲ್ಲೂಕು ಯುವ ಘಟಕದ ವಿನಯ್, ಅಕ್ಷಯ್, ಯೋಗೇಶ್,ಬೆಳಗೋಡು ಹೋಬಳಿಯ ಶಿವಪ್ಪ,ಶಿವಕುಮಾರ್,ಬಾಗೆ ಘಟಕದ ಶೇಖರ್ ರಾಜ್,ಶೇಖರ್,ವಿಲ್ಸನ್,ಲೋಕೇಶ್,
ಕೋಮಲೇಶ್,ಶಶಿ ಇತರ ಪದಾಧಿಕಾರಿಗಳು ಮತ್ತು ಗ್ರಾಮಸ್ಥರಿದ್ದರು.

