ಸಕಲೇಶಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಜೆ ಎಸ್ ಎಸ್ ಪ್ರೌಢಶಾಲೆ ಕೌಡಹಳ್ಳಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಎಡೆಹಳ್ಳಿ ಆರ್ ಮಂಜುನಾಥ್ 12 ನೇ ಶತಮಾನದಲ್ಲಿ ಶರಣರು ಮಾಡಿದ ಅಂದಿನ ವಚನಗಳನ್ನು ಇವತ್ತಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 1986 ರಲ್ಲಿ ಸುತ್ತೂರಿನ ರಾಜೇಂದ್ರ ಸ್ವಾಮೀಜಿ ಯವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ್ನು ಹುಟ್ಟು ಹಾಕಿದ್ದು, ನೂರಾರು ಶರಣರು ದತ್ತಿಗಳನ್ನು ಇಡುವ ಮೂಲಕ ಶರಣರ ವಚನಗಳನ್ನು ಶಾಲಾ ಕಾಲೇಜ್ಗಳಲ್ಲಿ ಮಕ್ಕಳಿಗೆ ತಿಳಿಸುವದೇ ಶರಣ ಸಾಹಿತ್ಯ ಪರಿಷತ್ ಕೆಲಸವಾಗಿದ್ದು, ಇವತ್ತಿನ ಕಾರ್ಯಕ್ರಮಕ್ಕೆ ಹೆಬ್ಬಾಸಾಲೆ ಶರಣೆ ಶ್ರೀಮತಿ ಪುಷ್ಪ, ಶರಣ ಶ್ರೀ ದೇವರಾಜ್ ರವರು ಅವರ ತಂದೆ ತಾಯಿ ಹೆಸರಿನಲ್ಲಿ 25000 ದತ್ತಿ ಇಟ್ಟಿದ್ದು, ಇವತ್ತಿನ ಕಾರ್ಯಕ್ರಮವನ್ನು ಅವರ ದತ್ತಿಯಲ್ಲಿ ಮಾಡುತ್ತಿದ್ದು ಅವರಿಗೆ ದೇವರು ಒಳ್ಳೇಯ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸಿದರು
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶರಣ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷ ರಾಜೇಗೌಡರು, ಶರಣ ಸಾಹಿತ್ಯ ಪರಿಷತ್ ಯಾವುದೇ ಜಾತಿ ವರ್ಗಕ್ಕೆ ಸೀಮಿತವಾಗರಿದೇ ಎಲ್ಲಾ ವರ್ಗಕ್ಕೂ ಸೇರಿದಾಗಿದೆ ಎಂದರು
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಲೋಹಿತ್ ಕೌಡಳ್ಳಿ ಮಾತನಾಡುತ್ತ,ಶರಣ ಸಾಹಿತ್ಯ ಪರಿಷತ್ ಉದ್ದೇಶ ಮಾನವೀಯ ಮೌಲ್ಯಗಳು, ಹಾಗೂ 12 ನೇ ಶತಮಾನದ ಬಸವಣ್ಣ ನವರ ಅನುಭವ ಮಂಟಪದ ವಿಚಾರದಾರೆಗಳನ್ನು ಇವತ್ತಿನ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು
ದತ್ತಿ ಉಪನ್ಯಾಸ ನೀಡಿದ ಜೆ ಎಸ್ ಎಸ್ ವಿದ್ಯಾಸಂಸ್ಥೆಯ ಸಹಾಯಕ ಪ್ರಾ lಧ್ಯಾಪಕ ಆರ್ ಮಂಜುನಾಥ್ ರವರು ವಚನ ಸಾಹಿತ್ಯದ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು
ಶಾಲೆಯ ವಿದ್ಯಾರ್ಥಿಗಳು ವಚನಗಳನ್ನು ವಾಚನ ಮಾಡಿದರು
ಜೆ ಎಸ್ ಎಸ್ ಶಾಲೆಯ ಮುಖ್ಯೋಪಾಧ್ಯಾಯ ರಾದ ರೇಣುಕಾ ರಾಧ್ಯ ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನೆರೆವೆರಿಸಿಕೊಟ್ಟರು
ಈ ಒಂದು ಕಾರ್ಯಕ್ರಮದಲ್ಲಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೆ ಎಸ್ ಎಸ್ ಸಂಯೋಜಕರಾದ ಆರ್ ಮಂಜುನಾಥ್ ರವರಿಗೆ ಅಭಿನಂದಿ ಸಲಾಯಿತು ಕಾರ್ಯಕ್ರಮದಲ್ಲಿ ಕದಳಿ ವೇದಿಕೆ ಅಧ್ಯಕ್ಷಣಿ ಶ್ರೀಮತಿ ಮೀನಾಕ್ಷಿ ಖಾದರ್, ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಶಾರದಾ ಗುರುಮೂರ್ತಿ, ಬಿ ಎಡ್ ಕಾಲೇಜ್ ನ ಡಾಕ್ಟರ್ ನಂಜುಂಡಪ್ಪ, ಶ್ರೀಮತಿ ಪುಷ್ಪ ಹಾಗೂ ಶ್ರೀ ದೇವರಾಜ್ ಬೆಳೆಗಾರ ಸಂಘದ ಟಿ ಪಿ ಸುರೇಂದ್ರ,
ವೈ ಎಸ್ ಗಿರೀಶ್ ಭಾಗವಹಿಸಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಚೆನ್ನಬಸಪ್ಪ ನವರು ನಿರ್ವಹಿಸಿದರು


