ವಾರಕ್ಕೊಂದು ಹೊಸ ಘಟಕವೆಂಬ ಪಣತೊಟ್ಟಿರುವ ಮಲೆನಾಡು ರಕ್ಷಣಾ ಸೇನೆಯ ಮತ್ತೊಂದು ಘಟಕಉದ್ಘಾಟನೆ
ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಯವರು ಸಕಲೇಶಪುರದ ಕೌಡಹಳ್ಳಿಗೆ ಭೇಟಿ ನೀಡಿ ಕೌಡಹಳ್ಳಿ ಘಟಕವನ್ನು ಉದ್ಘಾಟನೆ ಮಾಡಿ, ಘಟಕದ ಅಧ್ಯಕ್ಷರಾಗಿ ಗಿರೀಶ್ ರವರನ್ನು ಆಯ್ಕೆಮಾಡಿ ಕನ್ನಡ ಭಾವುಟ ನೀಡುವುದರೊಂದಿಗೆ ಸಂಘಟನೆಯ ಜವಾಬ್ದಾರಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕೌಡಹಳ್ಳಿ ಹಾಗೂ ಸುತ್ತಮುತ್ತಲಿನ ಹಲವರು ಮಲೆನಾಡು ರಕ್ಷಣಾ ಸೇನೆಗೆ ಸೇರ್ಪಡೆಯಾದರು.
ಹಾಸನ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಸಕಲೇಶಪುರ ತಾ.ಉಪಾಧ್ಯಕ್ಷರಾದ ತೇಜೇಶ್ ತಾ.ಉಸ್ತುವಾರಿ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು,ಕೌಡಹಳ್ಳಿ ಗ್ರಾಮಸ್ಥರು ಈ ಸಂಧರ್ಭದಲ್ಲಿ ಹಾಜರಿದ್ದರು.
ಹೊಸ ಸಮಿತಿಗೆ ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷ ರಾದ ಸಾಗರ್ ಜಾನೇ ಕೆರೆ ಅಭಿನಂದನೆಗಳನ್ನು ತಿಳಿಸಿದ್ದಾರೆ
