ಸಕಲೇಶಪುರದ 3 ಮಂದಿಗೆ ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿನಾಂಕ 05.09.2025 ಶುಕ್ರವಾರ ಸಕಲೇಶಪುರ ದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾನು ಬಾಳು ವಿದ್ಯಾ ನಿಧಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಶ್ಮಿ,ಶುಕ್ರವಾರ ಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾ ನಿಕೇತನ ಶಾಲೆ ಶುಕ್ರವಾರ ಸಂತೆ, ಓಕ್ಸ್ ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಯ ಸಹ ಶಿಕ್ಷಕರಾದ ನಾಖಿಯಾ ಅಫ್ಸರ್ ರನ್ನು ಶಾಸಕರಾದ ಸಿಮೆಂಟ್ ಮಂಜುನಾಥ್, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪ, ಪುರಸಭೆ ಅಧ್ಯಕ್ಷರಾದ ಜ್ಯೋತಿ, ಟಸ್ಕೇರಿಯಾ ಶಿಕ್ಷಣ ಸಂಸ್ಥೆಯ ಗಿರೀಶ್, ಯಡೆ ಹಳ್ಳಿ ಆರ್ ಮಂಜುನಾಥ್, ಜಾಕಿರ್ ಮಲ್ನಾಡ್ ಮತ್ತಿತರರು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
