ಕರಗೂರು ಗ್ರಾಮದ ರೈತ ಪ್ರಕಾಶ್ ಎಂಬವರು ನದಿಯಲ್ಲಿ ಬಿದ್ದು ನಾಪತ್ತೆ ಆಗಿದ್ದಾರೆ.
ಯಸಳೂರು ಹೋಬಳಿಯ ಕರಗೂರುವಿನ ಪ್ರಕಾಶ್ ರವರು ದನಗಳನ್ನು ಮೇಯಿಸೋಕೆ ಹೋಗಿದ್ದ ಸಂದರ್ಭದಲ್ಲಿ ಕಾಲು ಸಂಕದಲ್ಲಿ ಕಾಲು ಜಾರಿ ನದಿ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೋಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ಶೋಧ ಕಾರ್ಯ ತೀವ್ರ ಗೊಂಡಿದೆ