ಕಾಡುಮನೆಯಲ್ಲಿ ಇರುವಂತಹ ಎತ್ತಿನಹೊಳೆಯ D-2 ಗೇಟ್ ಬಳಿ ನೀರು ಜೋರಾಗಿ ಹರಿಯುತಿದ್ದು,ಇದಕ್ಕೆ ಸುರಕ್ಷಿತವಾದ ಮೇಲ್ಚಾವಣಿ ಇಲ್ಲದಿರುವುದರಿಂದ ಪ್ರತಿನಿತ್ಯ ಹಲವರು ಈಜುಹೊಡೆಯಲು ಬರುತ್ತಿದ್ದು ನೀರು ವೇಗವಾಗಿ ನುಗ್ಗಿದರೆ ಪ್ರಾಣಾಪಾಯವಾಗುವುದು ಖಂಡಿತ ಎಂದು ಮಲೆನಾಡು ರಕ್ಷಣಾ ಸೇನೆ ತಿಳಿಸಿದೆ.
ಅರಣ್ಯ ಇಲಾಖೆ ಹಾಗೂ ಎತ್ತಿನ ಹೊಳೆ ಯೋಜನೆಗೆ ಸಂಬಂಧ ಪಟ್ಟವರು ಇಲ್ಲಿ ಕಾವಲುಗಾರರನ್ನು ನೇಮಿಸಿಲ್ಲ ಹಾಗಾಗಿ ಇದು ಅನೈತಿಕ ಚಟುವಟಿಕೆಯ ತಾಣವಾಗಿದೆ . ಮದ್ಯ ಸೇವನೆ, ಡ್ರಗ್ ಸೇವನೆ ಮಾಡುವುದು ಹಾಗೂ ಮಹಿಳೆಯರೊಂದಿಗೆ ಬಂದಂತಹ ಪ್ರವಾಸಿಗರು ಅನುಚಿತವಾಗಿ ವರ್ತಿಸುವುದು ಸ್ಥಳೀಯರಿಗೆ ಮುಜುಗರ ಹಾಗೂ ನುಂಗಲಾರದ ತುತ್ತಾಗಿದೆ.
ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಇಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಮಲೆನಾಡು ರಕ್ಷಣಾ ಸೇನೆಯ ತಾ.ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಹಾಗೂ ಮಲೆನಾಡು ರಕ್ಷಣಾ ಸೇನೆಯ ಕಾಡುಮನೆ ಘಟಕದ ಅಧ್ಯಕ್ಷರಾದ ಮಹೇಶ್ ಕಾಡುಮನೆಯವರು ಆಗ್ರಹಿಸಿದ್ದಾರೆ.
