ಆಲೂರು.ಪಟ್ಟಣದ ಉರ್ದು ಶಾಲೆ ಮುಂಭಾಗ ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆಲೂರಿನ ಕೊನೆಪೇಟೆ ಕಡೆಯಿಂದ ಬಂದ ಕಾರು ಯು ಟರ್ನ್ ಪಡೆದು ಮತ್ತೆ ಕೊನೆ ಪೇಟೆ ಕಡೆ ತಿರುಗುವ ವೇಳೆ ಟ್ಯಾಂಕರ್ ಲಾರಿ ಹಾಗೂ ಗೂಡ್ ಲಾರಿಗಳೆರಡು ಕಾರಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಸಡನ್ ಬ್ರೇಕ್ ಹಾಕಿದ ಪರಿಣಾಮ, ಹಿಂದೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮುಂದೆ ಇದ್ದ ಗೂಡ್ಸ್ ಲಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮದಿಂದಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆಯ ಕೆನ್ನೆಯ ಒಳಭಾಗ ಕತ್ತರಿಸಿದರೇ ಮತ್ತೊಬ್ಬ ಮಹಿಳೆಯ ಯಡಗೈ ಮೂಳೆ ಮುರಿತಗೊಂಡಿದ್ದು ಇನ್ನೂ ಹಲವರಿಗೆ ಹಲ್ಲುಗಳು ಮುರಿದಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿಗಳು ವೇಗವಾಗಿ ಚಲಿಸುತ್ತಿದ್ದರೆ, ಇನ್ನು ಹೆಚ್ಚಿನ ದೊಡ್ಡ ದುರಂತವೇ ನಡೆಯುತ್ತಿತ್ತು,
ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಅಪಘಾ*ತವಾದ ನಂತರ ಕೆ ಎಸ್ ಆರ್ ಟಿ ಸಿ ಬಸ್ನ ಚಾಲಕ ಬಸ್ಸನ್ನು ರಸ್ತೆಯ ಬದಿಗೆ ಹಾಕಿ ಚಾಲಕ ಹಾಗೂ ನಿರ್ವಾಹಾಕರಿಬ್ಬರು ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದರೆ, ಲಾರಿ ಚಾಲಕರಿಬ್ಬರು ಅಪಘಾತವಾಗಿದ್ದನ್ನು ಕಂಡು ಸ್ಥಳದಿಂದ ತಮ್ಮ ತಮ್ಮವಾಹನಗಳನ್ನು ನಿಲ್ಲಿಸದೆ ಕಾಲ್ ಕಿತ್ತು ಪರಾರಿಯಾಗಿದ್ದಾರೆ. ಅಪಘಾತವನ್ನು ನೋಡಿದ ಸ್ಥಳೀಯರು ಕೆ ಎಸ್ ಆರ್ ಟಿ ಸಿ ಬಸ್ಸಿನ ಪ್ರಯಾಣಿಕಾರನ್ನು ಗಮನಿಸಿ ಅಪಘಾ*ತದಿಂದ ಗಾಯಗೊಂಡವರನ್ನು ತಮ್ಮ ಕಾರುಗಳಲ್ಲಿ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರದೊಯ್ದು ಮಾನವೀಯತೆ ಮೆರೆದಿದ್ದಾರೆ.
