ಗುಲಗಳಲೆ ರಾಟೆ ಮನೆ ಕ್ರಾಸ್ ಬಳಿ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವು ನೋವಿನ ನಡುವೆ ಒದ್ದಾಡುತ್ತಿತ್ತು.
ಇದನ್ನು ಕಂಡು ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷರಾದ ಸಾಗರ ಜಾನೆಕೆರೆ ಮತ್ತು ಸ್ಥಳೀಯರಾದ ಕಲಂದರ್, ವಿನಯ್ ದಿವಾಕರ್ ಅವರು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ಮಾಡಿ ಅರಣ್ಯ ಇಲಾಖೆ ವಾಹನವನ್ನು ತರಿಸಿ ಅರಣ್ಯ ಇಲಾಖೆಯ ವಾಹನದ ಮುಖಾಂತರ ನಡುರಾತ್ರಿ ಒಂದು ಗಂಟೆಯಲ್ಲಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿ ದೇವರಾಜ್ ಮತ್ತು ತಂಡ ಸ್ಥಳಕ್ಕೆ ಆಗಮಿಸಿದ್ದರು.
ತಡರಾತ್ರಿ ಒಂದು ಗಂಟೆಗೆ ಪಶು ವೈದ್ಯರಾದ ಡಾ. ಶಿವು ಅವರು ಬಂದು ಚಿಕಿತ್ಸೆಯನ್ನು ನೀಡಿದರು.
