ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದ ತಂಡವನ್ನು ಸಕಲೇಶಪುರ ಮಾರ್ಗಮಧ್ಯೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.
ರಾಜ್ಯದ ಹಲವಾರು ಭಾಗಗಳಿಂದ ಈಗಾಗಲೇ ಧರ್ಮಸ್ಥಳದತ್ತ ಹಲವಾರು ಮಂದಿ ತಮ್ಮ ಯಾತ್ರೆಯನ್ನು ಆರಂಭ ಮಾಡಿದ್ದಾರೆ.

