
ರಾಮಧೂತ ಹಿಂದೂ ಮಹಾಗಣಪತಿ. ಸಕಲೇಶಪುರದ ಗಣಪತಿ ಯನ್ನು ಇಂದು ಸಕಲೇಶಪುರ ಕ್ಕೆ ತರಲಾಗುತ್ತಿದೆ.
ಈ ದಿನ ಬೆಳಿಗ್ಗೆ ಗಂಟೆ 9:15 ಕ್ಕೆ ರಾಮಧೂತ ಹಿಂದೂ ಮಹಾಗಣಪತಿಯು ಸಕಲೇಶಪುರ ನಗರ ಪ್ರವೇಶ ಮಾಡಲಿದೆ. ಸಕಲೇಶಪುರ ದ ಶ್ರೀ ಗುಹೆಕಲ್ಲಮ್ಮ ದೇವಸ್ಥಾನ. ಬಾಳೆಗದ್ದೆ ಯಿಂದ ಸ್ವಾಗತ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಹಿಂದೂ ಮಹಾಗಣಪತಿ ಕಾರ್ಯಕ್ರಮ ನಡೆಯುವ ಪೆಂಡಾಲ್ ನಲ್ಲಿ ಈ ಮೂರ್ತಿ ಇರಿಸಲಾಗುವುದು.
ಬೆಂಗಳೂರುನಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದ್ದು ಈಗಾಗಲೇ ಬೆಂಗಳೂರುನಿಂದ ಆಲೂರು ಬೈರಾಪುರ ವರೆಗೆ ತರಲಾಗಿದೆ. ಗಣೇಶೋತ್ಸವ ದಿನದಿಂದ ಧಾರ್ಮಿಕ ಕಾರ್ಯಕ್ರಮ ಆರಂಭ ಆಗಲಿದೆ.
ಭಕ್ತಾಭಿಮಾನಿಗಳು ತಮ್ಮ ತಮ್ಮ ವಾಹನಗಳಲ್ಲಿ ಸಮಿತಿಯ ಪದಾಧಿಕಾರಿಗಳು / ಹಿಂದೂ ಹಿತರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಿತಿ ತಿಳಿಸಿದೆ..
