ಬೇಲೂರುನಲ್ಲಿ ಸಾಲು ಮರದ ತಿಮ್ಮಕ್ಕರವರು ನೆಟ್ಟು ಬೆಳೆಸಿದ್ದ ಮರಗಳನ್ನು ತೆರವು ಮಾಡಿದ ತಹಸೀಲ್ದಾರ್ ರನ್ನು ಅಮಾನತು ಮಾಡುವಂತೆ ಮಲೆನಾಡು ರಕ್ಷಣಾ ಸೇನೆ ಆಗ್ರಹಿಸಿದೆ
ಅವರು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಈ ರೀತಿ ಇದೆ
ಗೆ:-
ಮಾನ್ಯ ಜಿಲ್ಲಾಧಿಕಾರಿಗಳು
ಹಾಸನ
ವಿಷಯ:-
ಹಾಸನ ಜಿಲ್ಲೆ ಬೇಲೂರು ತಾಲೂಕಿನ ತಾಲೂಕು ಕಚೇರಿ ಮುಂಭಾಗದಲ್ಲಿ ನಾಡೋಜ ಸಾಲುಮರದ ತಿಮ್ಮಕ್ಕ ರವರು ನೆಟ್ಟು ಬೆಳೆಸಿದ್ದ ಮರಗಳನ್ನು ತೆರವು ಮಾಡಿರುವ ತಹಸಿಲ್ದಾರ್ ರವರನ್ನು ಅಮಾನತ್ತು ಮಾಡುವ ಬಗ್ಗೆ
ಮಾನ್ಯರೇ :-
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ನಾಡೋಜ ಸಾಲುಮರದ ತಿಮ್ಮಕ್ಕ ರವರು ಪದ್ಮಶ್ರೀ ಪುರಸ್ಕೃತರು ಹಾಗೂ ಪರಿಸರ ರಾಯಭಾರಿ ಕ್ಯಾಬಿನೆಟ್ ದರ್ಜೆ ಕರ್ನಾಟಕ ಸರ್ಕಾರ ಇವರ ಪರಿಸರ ಪ್ರೇಮದ ಬಗ್ಗೆ ವಿಶ್ವವಿಕ್ಯಾತಿ ಪಡೆದಿದ್ದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು 2018 -19ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಗಳನ್ನು ಘೋಷಣೆ ಮಾಡಿ ಅನುಷ್ಠಾನಗೊಳಿಸುವ ಮೂಲಕ ಸಾಲುಮರದ ತಿಮ್ಮಕ್ಕರವರಿಗೆ ಬಹುದೊಡ್ಡ ಗೌರವ ಸಲ್ಲಿಸಲಾಗಿದೆ.
ಬಹು ಮುಖ್ಯವಾಗಿ 2016ನೇ ಸಾಲಿನಲ್ಲಿ ಬಿಬಿಸಿಯು ಬಿಡುಗಡೆ ಮಾಡಿದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಡೋಜ ಡಾಕ್ಟರ್ ಸಾಲುಮರದ ತಿಮ್ಮಕ್ಕ ರವರ ಹೆಸರು ಸೇರಿರುವುದು ದೇಶಕ್ಕೆ ಸಂದ ಗೌರವ ಬಿಬಿಸಿಯು ತಿಮ್ಮಕ್ಕ ನವರನ್ನು ಪ್ರಭಾವಿ ಮತ್ತು ಸ್ಪೂರ್ತಿದಾಯಕ ಮಹಿಳೆ ಎಂದು ಘೋಷಿಸಿದ್ದಾರೆ.
ಭಾರತ ಸರ್ಕಾರವು ಸಿ ಬಿ ಎಸ್ ಸಿ ಪಠ್ಯಕ್ರಮದಲ್ಲಿಯೂ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮ ಮತ್ತು ಸಾಧನೆಯ ಬಗ್ಗೆ ಪಠ್ಯವನ್ನು ಅಳವಡಿಸಿದೆ ಕರ್ನಾಟಕ ಸರ್ಕಾರವು ಸಹ ಇದೇ ವಿಷಯವನ್ನು ಸಾಕ್ಷರತಾ ಆಂದೋಲನದ ಪಠ್ಯಕ್ರಮದಲ್ಲಿ ಅಳವಡಿಸಿದೆ ಮತ್ತು ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದ ಒಂದರಿಂದ ಒಂಬತ್ತನೇ ತರಗತಿ ಹಾಗೂ ಎಸ್ ಎಸ್ ಎಲ್ ಸಿ ಪಠ್ಯಕ್ರಮದಲ್ಲಿ ಹಾಗೂ 12ನೇ ತರಗತಿಯ ರಾಜ್ಯಶಾಸ್ತ್ರದ ಪಠ್ಯದಲ್ಲಿ ಅಳವಡಿಸಿದೆ ಇಂತಹ ಮಹಾನ್ ವೃಕ್ಷ ಮಾತೆ ತಮ್ಮದೇ ಊರಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ಹಲವಾರು ವರ್ಷಗಳಿಂದ ಮರಗಳನ್ನು ನೆಟ್ಟು ಪೋಷಿಸಿದ್ದು ಇದೇ ಎರಡು ವರ್ಷಗಳ ಹಿಂದೆ ಹೋಗಿದ್ದ ಗಿಡಗಳನ್ನು ತೆಗೆದು ಮತ್ತೆ ಹೊಸ ಸಸಿಗಳನ್ನು ನೆಟ್ಟು ಜನರಿಗೆ ನೆರಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಹಣ್ಣು ದೊರೆಯುವ ಉದ್ದೇಶದಿಂದ ಗಿಡಗಳನ್ನು ಪೋಷಿಸುತ್ತಿದ್ದರು ಆದರೆ ಕೆಲವು ದಿನಗಳ ಹಿಂದೆ ಬೇಲೂರಿನ ತಹಸೀಲ್ದಾರ್ ರವರು ಇಂಥ ಮಹಾನ್ ವೃಕ್ಷಮಾತೆ ನೆಟ್ಟಿದ್ದ ಗಿಡಗಳನ್ನು ಏಕಾಏಕಿ ತೆರವು ಗೊಳಿಸಿ ವೃಕ್ಷಮಾತೆಯ ಮನಸ್ಸಿಗೆ ಹಾಗೂ ಪ್ರಕೃತಿಗೆ ತುಂಬಲಾರದ ನಷ್ಟವನ್ನು ಮಾಡಿದ್ದು ಈ ವಿಚಾರವಾಗಿ ಸ್ಥಳೀಯರು ದೂರವಾಣಿ ಮೂಲಕ ಅವರ ದತ್ತು ಮಗರಾದ ಬಳ್ಳೂರು ಉಮೇಶ್ ರವರಿಗೆ ತಿಳಿಸಿದ್ದು ಆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಯಾವ ಉದ್ದೇಶದಿಂದ ಮರಗಳನ್ನು ತೆರವುಗೊಳಿಸಿದ್ದೀರಿ ಎಂದು ಕೇಳಿದಾಗ ( ಇದು ನನ್ನ ಇಷ್ಟ ಇಲ್ಲಿ ನಾನು ಯಾರ ಅಪ್ಪಣೆಯು ತೆಗೆದುಕೊಳ್ಳಬೇಕಾಗಿಲ್ಲ ) ಏನು ಮಾಡಿಕೊಳ್ಳುತ್ತೀರಾ? ಮಾಡಿಕೊಳ್ಳಿ ಎಂದು ಅವರಿಗೆ ತಿರುಗು ಉತ್ತರ ನೀಡಿ ಉಡಾಫೆ ತೋರಿದ್ದು ಈ ಒಂದು ಕೆಲಸದಿಂದ ವೃಕ್ಷ ಮಾತೆ ತಾಯಿ ಸಾಲುಮರದ ತಿಮ್ಮಕ್ಕಾರವರಿಗೂ ತುಂಬಾ ನೋವಾಗಿದ್ದು ಈ ಕೂಡಲೇ ಇಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಬೇಕೆಂದು ಹಾಗೂ ಮರಗಳನ್ನು ತೆಗೆದು ಹಾಕಿರುವ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ರವರ ನೇತೃತ್ವದಲ್ಲಿ ಮತ್ತೆ ಗಿಡಗಳನ್ನು ನೆಡುವ ಮುಖಾಂತರ ಆ ಋಕ್ಷಮತೆಗೆ ಗೌರವ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಾ ತಕ್ಷಣ ಅಮಾನತ್ತು ಮಾಡದಿದ್ದಲ್ಲಿ ಮುಂದಿನ ಸೋಮವಾರದ ನಂತರ ನಾಡೋಜ ಸಾಲುಮರದ ತಿಮ್ಮಕ್ಕರವರು ಹಾಗೂ ಮಲೆನಾಡು ರಕ್ಷಣಾ ಸೇನೆ ಸಂಪೂರ್ಣ ಬೆಂಬಲದೊಂದಿಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಈ ಮೂಲಕ ತಿಳಿಸುತ್ತಾ ವೃಕ್ಷ ಮಾತೆಗೆ ಹಾಗೂ ಅವರ ಪರಿಸರ ಕಾಳಜಿಯ ಕೆಲಸಗಳಿಗೆ ಗೌರವ ಯುತ ವಾಗಿ ನಡೆಸಿಕೊಳ್ಳಬೇಕೆಂದು ಈ ಮೂಲಕವಾಗಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

