ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಡಾಡುವ ಎಲ್ಲಾ ಆಟೋಗಳಿಗೆ ನಗರ ಪೊಲೀಸ್ ಠಾಣೆ ವತಿಯಿಂದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆಟೋಗಳಿಗೆ ಸೀರಿಯಲ್ 1 ರಿಂದ ಗುರುತಿನ ಸಂಖ್ಯೆಯನ್ನು ನೀಡಲಾಗಿದ್ದು ನಂತರ ಎಲ್ಲಾ ಆಟೋ ಚಾಲಕರಿಗೆ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸಲಾಯಿತು
.ಈ ವಿನೂತನ ಕಾರ್ಯಕ್ಕೆ ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಬಿ.ಪ್ರಮೋದ್ ಕುಮಾರ್ ಚಾಲನೆ ನೀಡಿದರು.ಇನ್ಸ್ ಪೆಕ್ಟರ್ ಜಗದೀಶ್ ಸಬ್ ಇನ್ಸ್ ಪೆಕ್ಟರ್ ಗಳಾದ ಮಹೇಶ್, ಕೃಷ್ಣಪ್ಪ , ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಪುಟ್ಟರಾಜು ಹಾಜರಿದ್ದರು.



