ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಯವರು ಕಾಡುಮನೆಗೆ ಭೇಟಿ ನೀಡಿ ಕಾಡುಮನೆ ಘಟಕವನ್ನು ಉದ್ಘಾಟನೆ ಮಾಡಿದರು.
ನೂತನ, ಘಟಕದ ಅಧ್ಯಕ್ಷರಾಗಿ ಮಹೇಶ್ ರವರನ್ನು ಆಯ್ಕೆಮಾಡಿ ಕನ್ನಡ ಭಾವುಟ ನೀಡುವುದರೊಂದಿಗೆ ಸಂಘಟನೆಯ ಜವಾಬ್ದಾರಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ಜನಪರ ಕಾರ್ಯಗಳನ್ನು ಮೆಚ್ಚಿ ಕಾಡುಮನೆ ಹಾಗೂ ಸುತ್ತಮುತ್ತಲಿನ ಹಲವರು ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಗೆ ಸೇರ್ಪಡೆಯಾದರು.
ಸಕಲೇಶಪುರ ತಾ.ಉಪಾಧ್ಯಕ್ಷರಾದ ತೇಜೇಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
