ಮಳೆಯ ಅಬ್ಬರಕ್ಕೆ ಸಕಲೇಶಪುರ ಕಡಗರವಳ್ಳಿಯ ಸರಕಾರಿ ಶಾಲೆಯ ಗೋಡೆ ಹಾಗೂ ಹೆಂಚುಗಳು ಕುಸಿದು ನೆಲಕ್ಕೆ ಬಿದ್ದಿರುವ ಘಟನೆ ವರದಿ ಆಗಿದೆ.
ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ಗೋಡೆ ಕುಸಿದು ಬಿದ್ದಿದೆ.
ಆದರೆ ಆ ಕಟ್ಟಡದಲ್ಲಿ ಮಕ್ಕಳಿಗೆ ತರಗತಿ ಮಾಡಲಾಗುತ್ತಿರಲಿಲ್ಲ. ಹೊಸ ಕಟ್ಟಡದಲ್ಲಿ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇನ್ನೊಂದು ಕಡೆ ಆನೆ ಮಹಲ್ ಬಳಿಯ ಸರಕಾರಿ ಶಾಲೆಯ ಆವರಣ ಗೋಡೆ ಕೂಡಾ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ



