ಹಾನುಬಾಳು ಗ್ರಾಮ ಪಂಚಾಯತ್ ಹಾಗು ನಾಡ ಕಚೇರಿ ಮುಂಬಾಗ, ಸಕಲೇಶಪುರ ಮೂಡಿಗೆರೆ ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ಅನಾಧಿಕಾಲದಿಂದ ವಿದ್ಯುತ್ ಸಾಗಿಸುವ ಪವರ್ ಲೈನ್ ನ ಕಂಬ ಕಬ್ಬಿಣದಾಗಿದ್ದು, ಮಳೆಗಾಲದಲ್ಲಿ ವಿದ್ಯುತ್ ಯಾವುದೆ ಸಂದರ್ಭದಲ್ಲೂ ರಸ್ತೆಗೆ ಅ ಕಬ್ಬಿಣದ ಕಂಬದ ಮುಖಾಂತರ ಹರಿದು ಜನ ಜಾನುವಾರು ಗಳಿಗೆ ಪ್ರಾಣಪಾಯ ಆಗುವ ಅಪಾಯ ವಿದೆ ಎಂದು ಅವರೇಕಾಡು ಪ್ರಥ್ವಿ ತಿಳಿಸಿದ್ದಾರೆ
ಈ ಹಿಂದೆ ಇದೆ ಕಂಬದ ಗ್ರೌಂಡಿಂಗ್ ತಂತಿ ಯಲ್ಲಿ ವಿದ್ಯುತ್ ಹರಿದು ಹಾನುಬಾಳು ವಿನ ರೈತ ಅಪ್ಪಣ್ಣ ಅವರ ಹಸು ವಿಗೆ ತಾಗಿ ಅಸುನೀಗಿತ್ತು
I ಜಾಗದಲ್ಲಿ ದಿನ ನಿತ್ಯ ಶಾಲಾ ಕಾಲೇಜು ಮಕ್ಕಳು ಹಾಗು ವಾರದ ಸಂತೆ ದಿನ ಸಾವಿರಾರು ಜನರು ಓಡಾಡುವ ಸ್ಥಳವಾದ್ದರಿಂದ ಇ ಅಪಾಯಕಾರಿ ಕಬ್ಬಿಣದ ಕಂಬ ತೆಗೆದು ಕಾಂಕ್ರೀಟ್ ನ ರೌಂಡ್ ಕಂಬ ಹಾಕುವ ತುರ್ತು ಅವಶ್ಯಕತೆ ಇದೆ,
ಹಿಂದೆ ಹಲವು ಬಾರಿ ಈ ಕಬ್ಬಿಣದ ಕಂಬ ಬದಲಾವಣೆ ಮಾಡಲು ಚೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ನಿರ್ಲಕ್ಷ ಮಾಡಿದ್ದಾರೆ
ಏನಾದರೂ ಅನಾಹುತ ಆದರೆ ಅದಕ್ಕೆ ಚೆಸ್ಕಾಂ ಅಧಿಕಾರಿಗಳೆ ಹೊಣೆ ಎಂದು ಸಾಮಾಜಿಕ ಹೋರಾಟಗಾರ ಅವರೇಕಾಡು ಪೃಥ್ವಿ ತಿಳಿಸಿದ್ದಾರೆ
