ತುಂಬಿ ಹರಿಯುತ್ತಿರುವ ಮಲೆನಾಡಿಗರ ಜೀವನದಿ ಹೇಮಾವತಿ ನದಿಗೆ ಇಂದು ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ ಮತ್ತು ಪುರಸಭೆಯ ಅಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರು ಬಾಗಿನ ಅರ್ಪಿಸಿದರು.
ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ಹೇಮಾವತಿ ತುಂಬಿ ಹರಿಯುತ್ತಿದ್ದು ಇಂದು ಮಂಗಳವಾರ ಪಟ್ಟಣದ ಹೇಮಾವತಿ ಸೇತುವೆಯ ಮೇಲಿಂದ ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜಕುಮಾರ್ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್, ಸಬ ಭಾಸ್ಕರ್, ಹೆತ್ತೂರು ದಿವಾಕರ್, ಹೆತ್ತೂರು ಸುದರ್ಶನ್ ಜಾ ತಳ್ಳಿ ಪುಟ್ಟಸ್ವಾಮಿ ಗೌಡ್ರು , ಸುಮನ್ ಹೆತ್ತೂರು, ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್, ಪ್ರಸಾದ್ ಗೌಡ ವಳಲಹಳ್ಳಿ, ಪುರಸಭಾ ಸದಸ್ಯರಾದ ಎಸ್ ಡಿ ಆದರ್ಶ್, ಮುಕೇಶ್ ಶೆಟ್ಟಿ, ಎಂಬಿ ಉಮೇಶ್, ಇಸ್ರಾರ್, ವಿದ್ಯಾ ಪ್ರಭಾಕರ್, ಎಸ್ ಕೆ ಸೂರ್ಯ, ಸರಿತಾ ಗಿರೀಶ್, ಜೆಡಿಎಸ್ ಮುಖಂಡರಾದ ರಮೇಶ್ ಕರಗೂರು, ಮಲ್ಲೇಶ್ ಹೆತ್ತೂರು, ಸುರೇಶ್ ಆಳ್ವ, ರೋಹಿತ್ ಬಾಳು ಇತರರು ಇದ್ದರು.

