ಎಸ್ ವೈ ಎಸ್ ದೇಖ್ಲ ಯೂನಿಟ್ ವತಿಯಿಂದ ಸ್ವಾತಂತ್ರೋತ್ಸವ ಹಾಗು ಸರ್ವ ಧರ್ಮೀಯರ ಸೌಹಾರ್ದ ಚಹಾ ಕೂಟ*
79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ದೇಖ್ಲ
ಗ್ರಾಮದ SYS (ಸುನ್ನಿ ಯುವಜನ ಸಂಘ) ಯೂನಿಟ್ ವತಿಯಿಂದ ಸ್ವಾತಂತ್ರೋತ್ಸವ ಹಾಗು ಸರ್ವ ಧರ್ಮೀಯರ ಸೌಹಾರ್ದ ಚಹಾ ಕೂಟ mjm ಸಭಾಂಗಣದಲ್ಲಿ ಸಂಜೆ 4:00 ಗಂಟೆಗೆ ನಡೆಯಿತು
ಸಭೆಯ ಅಧ್ಯಕ್ಷತೆಯನ್ನು SYS ಅಧ್ಯಕ್ಷರಾದ KA ಅದಮ್ ರವರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ವಿವಿಧ ಸಮುದಾಯದ ನಾಯಕರುಗಳು ಭಾಗವಹಿಸಿ *ನಿನ್ನಯ ನೆನಪು ನಾಳಿನ ನಿರೀಕ್ಷೆ* ಎಂಬ ವಿಷಯದ ಕುರಿತು ತಮ್ಮ ತಮ್ಮ ಅನುಭವ ,ಅನಿಸಿಕೆ, ಅಭಿಪ್ರಾಯ ವನ್ನು ಹಂಚಿಕೊಂಡರು .
ವೀರಶೈವ ಧರ್ಮದ ಮುಖಂಡರಾಗಿ ಶ್ರೀ *ನೀಲಕಂಠಪ್ಪ ನಡಹಳ್ಳಿ*
ಹಾಗು ಜಂಗಮ ಸಮುದಾಯದ ಮುಖಂಡರಾಗಿ ಶ್ರೀ *ಸಂತೋಷ್ ಮಟದೇವರಳ್ಳಿ*
ಹಾಗು ವಿಶ್ವಕರ್ಮ ಸಮುದಾಯದ ಮುಖಂಡರಾಗಿ ಶ್ರೀ *ಕೇಶವಮೂರ್ತಿ ಮಲ್ಲಾಗದ್ದೆ ,& ಶ್ರೀ ಮೇಘರಾಜ ದೇಖ್ಲ*
ಹಾಗು ಕ್ರಿಶ್ಚಿಯನ್ ಸಮುದಾಯದ ಮುಖಂಡರಾಗಿ ಶ್ರೀ *ಸನ್ನಿ ಆಂಡ್ರೋಸ್ ಕುಂಬರಡಿ* ಹಾಗು
ಲಿಂಗಾಯತ ಸಮುದಾಯದ ಮುಖಂಡರಾಗಿ ಶ್ರೀ *ಪವನ್ ಕುಮಾರ್ ಗುರ್ಜನಹಳ್ಳಿ& ಶ್ರೀ ಕಿರಣ್ ಕುಮಾರ್ ದೇಖ್ಲ* ಹಾಗು
ದಲಿತ ಸಮುದಾಯದ ಮುಖಂಡರಾಗಿ ಶ್ರೀ *ಕುಮಾರ ಕುಶಾಲನಗರ* ರವರುಗಳು ಪಾಲ್ಗೊಂಡಿದ್ದರು .
SYS ಮುಖ್ಯ ಕಾರ್ಯದರ್ಶಿ ಅಬ್ದುಲ್ ರವೂಫ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊನೆಯಲ್ಲಿ ಜಾಫರ್ ರವರು ವಂದನಾರ್ಪಣೆ ನೆರವೇರಿಸಿದರು.
