ಸಕಲೇಶಪುರದ ಒಸ್ಸುರು ಬಳಿಯಿಂದ ಮಠ ಸಾಗರ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಆನೆಯೊಂದು ಸಂಚಾರ ಮಾಡಿದೆ ಎಂದು ತಿಳಿದು ಬಂದಿದೆ.
ಅತೀ ಹೆಚ್ಚು ಗುಂಪಾಗಿ ಇರುತ್ತಿದ್ದ ಆನೆಗಳು ಈಗ ಸಕಲೇಶಪುರದಲ್ಲಿ ಅತೀ ಕಡಿಮೆ ಕಾಣಿಸಿ ಕೊಳ್ಳುತ್ತಿದೆ.
ವಡೂರುನಲ್ಲಿ 1 ಆನೆ, ಕಾಮನ ಹಳ್ಳಿ ಯಲ್ಲಿ 1 ಆನೆ,
ಅರೇ ಹಳ್ಳಿಯ ಹುಲಿಯ ಮಕ್ಕಿ ಬಳಿ 7 ಆನೆಗಳು ಇರುವುದಾಗಿ ಅರಣ್ಯ ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿ ದಿನ ಬೆಳಿಗ್ಗೆ ಗ್ರಾಮೀಣ ಪರಿಸರಕ್ಕೆ ತೆರಳಿ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ
