ವರದಿ : ನವೀನ್ ಬೈರಾ ಪುರ
ಆಲೂರು ತಾಲೂಕಿನ ಹಂಚೂರು ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿಯನ್ನು ಅಪಹರಣ ಮಾಡುವ ಪ್ರಯತ್ನ ಇಂದು ಬೆಳಿಗ್ಗೆ ನಡೆದಿದೆ.
13 ವರ್ಷದ ಬಾಲಕಿ ಅರ್ಪಿತಾ ಅಪಹರಣದ ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಇಂದು ಬೆಳಿಗ್ಗೆ ತನ್ನ ಅಂಜಿಹಳ್ಳಿಯ ಮನೆಯಿಂದ ಶಾಲೆಗೆ ಹೊರಟಿದ್ದ ಅರ್ಪಿತಾಳನ್ನು ಬಿಳಿ ಮಾರುತಿ ಓಮ್ನಿ ಕಾರಿನಲ್ಲಿ ಬಂದ ವ್ಯಕ್ತಿಗಳು ಅಪಹರಣ ಮಾಡಲು ಪ್ರಯತ್ನ ಮಾಡಿದ್ದಾರೆ.
ಅಪಹರಣ ಸಂದರ್ಭದಲ್ಲಿ ತನ್ನ ಸ್ಕೂಲ್ ಬ್ಯಾಗ್ ಬಿಸಾಡಿ ಶಾಲೆಯತ್ತ ಓಡಿದ ಆಕೆ ತಪ್ಪಿಸಿ ಕೊಂಡಿದ್ದಾಳೆ.
ಆಕೆ ಈ ಬಗ್ಗೆ ಮಾಹಿತಿ ನೀಡಿದ್ದು ಕಾರಿನಲ್ಲಿ ಅಪರಿಚಿತರ ಜೊತೆಗೆ ಇಬ್ಬರು ವಿದ್ಯಾರ್ಥಿನಿಯರಿದ್ದರು ಎಂದು ತಿಳಿಸಿದ್ದಾಳೆ ಎಂಬ ಮಾಹಿತಿ ಲಭ್ಯ ಆಗಿದೆ
