ಸಕಲೇಶಪುರ ತಾಲ್ಲೂಕಿನ ಬಾಣಗೆರೆ ಸಂಪರ್ಕ ರಸ್ತೆಯನ್ನು ಡಾಮಾರಿ ಕರಣ ಮಾಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ಈ ರಸ್ತೆಯ ಮೂಲಕ ಸುಮಾರು 15 ಕ್ಕೂ ಮೀರಿ ಮನೆಗಳಿವೆ.
ಈ ರಸ್ತೆಯನ್ನು ಡಾಮಾರಿಕರಣ ಮಾಡುವಂತೆ ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ.
ಆದರೆ ಇಂದಿನವರೆಗೂ ಈ ಸಮಸ್ಯೆ ಪರಿಹಾರ ಕಂಡಿಲ್ಲ.
ಮಾಜಿ ಸಂಸದರಿಗೆ, ಮಾಜಿ ಶಾಸಕರಿಗೆ ಹಾಗೂ ಈಗಿನ ಶಾಸಕರಿಗೂ ಕಳಕಳಿಯಿಂದ ಕೇಳಿಕೊಂಡಿದ್ದೇವೆ.
ಆದರೆ 2 ಕಿ ಮೀ ಅಗತ್ಯವಿದ್ದ ರಸ್ತೆಗೆ ಕೇವಲ 70 ಮೀಟರ್ ಕಾಂಕ್ರೀಟ್ ಮಾಡಿದ್ದಾರೆ .
ಈ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಆನೆ ಸಮಸ್ಯೆ, ಕಾಡು ಕೋಣ ಸಮಸ್ಯೆ ಕೂಡಾ ಹೆಚ್ಚಿದೆ
ಸಂಪೂರ್ಣ ರಸ್ತೆ ಡಾಮಾರಿಕರಣ ಮಾಡಿ ಜನರ ಸಮಸ್ಯೆ ಪರಿಹಾರ ಮಾಡುವಂತೆ ಅವರು ಅಗ್ರಹಿಸಿದ್ದಾರೆ
