ಸಕಲೇಶಪುರದ ಐ ಓ ಬಿ ಬ್ಯಾಂಕ್ ಬಳಿಯ ಬೀದಿ ದೀಪ ಕಳೆದ ಹಲವಾರು ತಿಂಗಳುಗಳಿಂದ ಬೆಳಕು ನೀಡದೆ ಸಮಸ್ಯೆ ಉಂಟು ಮಾಡುತ್ತಿದೆ.
ಸಕಲೇಶಪುರದಲ್ಲಿ ದಿನನಿತ್ಯ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಈ ಬೀದಿ ದೀಪದ ಕತ್ತಲು ಕಳ್ಳರಿಗೆ ವರದಾನವಾಗಿ ಪರಿಣಾಮಿಸಿದೆ
ಈ ಪರಿಸರದಲ್ಲಿ ಆಸ್ಪತ್ರೆ, ದೇವಾಲಯ ಹಾಗೂ ಚಿನ್ನ ಬೆಳ್ಳಿ ಅಂಗಡಿ, ಬ್ಯಾಂಕ್ ಹೀಗೆ ಹಲವಾರು ವ್ಯವಸ್ಥೆಗಳಿವೆ.
ಈ ಬಗ್ಗೆ ಇದುವರೆಗೆ ಕೆಇಬಿ ಅವರಾಗಲಿ ಮುನ್ಸಿಪಾಲಿಟಿ ಸದಸ್ಯರಾಗಲಿ ಗಮನ ಹರಿಸದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.
