ಹಿಂದೂ ಹಿತರಕ್ಷಣಾ ವೇದಿಕೆಯ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಯಶಸ್ವಿ. ಪುನೀತ್ ಕೆರೆಹಳ್ಳಿ ಸಕಲೇಶಪುರ ನಿರ್ಬಂಧ ಸರ್ಕಾರದ ವಿರುದ್ಧ ರಘು ಸಕಲೇಶಪುರ ವಾಗ್ದಾಳಿ.
ಸಕಲೇಶಪುರ – ಹಿಂದೂ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಆಗಸ್ಟ್ 13 ರಂದು ಜರುಗಿದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಬೃಹತ್ ಪ್ರಮಾಣದ ಪಂಜಿನ ಮೆರವಣಿಗೆಯನ್ನು ಕಾರ್ಯಕರ್ತರು ನಡೆಸಿದರು..
ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಶ್ರೀ ಪುನೀತ್ ಕೆರೆಹಳ್ಳಿ ಅವರನ್ನು ಕೋಮುಸೂಕ್ಷ್ಮ ಪ್ರದೇಶ ಸಕಲೇಶಪುರ ಆಗಿರುವುದರಿಂದ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ 13/08/2025 ರಿಂದ 14/08/2025 ರವರಗೆ ಸಕಲೇಶಪುರ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಈ ನಡುವೆ ಹಿಂದೂ ಮುಖಂಡ ರಘು ಸಕಲೇಶಪುರ ಕಾರ್ಯಕ್ರಮ ಉದ್ದೇಶಿಸಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆಯೋಜಕರಾದ ಶಿವು ಜಿಪ್ಪಿ ಸೇರಿದಂತೆ ಕೌಶಿಕ್ ಹೆಚ್.ಎಂ, ಮಂಜುನಾಥ್ ಕಬ್ಬಿನಗದ್ದೆ, ದಿಲೀಪ್, ದುಶ್ಯಾಂತ್ ಗೌಡ, ಶ್ರೀಜಿತ್ ಗೌಡ, ಎಸ್.ಎಲ್ ಧರ್ಮೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.



