ವಿಶ್ವ ಹಿಂದೂ ಪರಿಷತ್ ಭಜರಂಗ ದಳ, ಹಿಂದೂ ಜಾಗರಣ ವೇದಿಕೆ ಸಕಲೇಶಪುರ ಇದರ ವತಿಯಿಂದ ಇಂದು ಸಕಲೇಶಪುರದಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ.
ಸಾಯಂಕಾಲ 6 ಗಂಟೆಗೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಒಕ್ಕಲಿಗ ಸಮುದಾಯ ಭವನವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಆಲೂರು ಮಠದ ಷ. ಬ್ರ. ಸದಾಶಿವಾಚಾರ್ಯ ಸ್ವಾಮಿಗಳು, ಶಾಸಕ ಸಿಮೆಂಟ್ ಮಂಜುನಾಥ್, ಉದ್ಯಮಿ ಶಿವಕುಮಾರ್ ಜಾಗಟೆ, ನಿವೃತ್ತ ಸೈನಿಕ ನೀಲ ಕಂಠಪ್ಪ, ಶರಣ್ ಪಂಪ್ ವೆಲ್, ಹರೀಶ್ ಕರಡಿ ಗಾಲ, ವಿಜಯ ಕುಮಾರ್, ಕಿಶೋರ್ ಶೆಟ್ಟಿ, ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
