ಹಿಂದೂ ಹಿತರಕ್ಷಣಾ ವೇದಿಕೆಯ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಪುನೀತ್ ಕೆರೆಹಳ್ಳಿ ದಿಕ್ಸೂಚಿ ಭಾಷಣ.
ಸಕಲೇಶಪುರ – ಆಗಸ್ಟ್ ತಿಂಗಳಲ್ಲಿ ಹಿಂದೂ ಸಂಘಟನೆ ಪ್ರತಿ ವರ್ಷ ನಡೆಸುವ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ದಿನಾಂಕ 13/08/2025 ಬುಧವಾರ ರಂದು ಸಂಜೆ 06:30 ಕ್ಕೆ ಸರಿಯಾಗಿ ಜರುಗಲಿದೆ.
ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಪಂಜಿನ ಮೆರವಣಿಗೆ ಮಾಡಿ ಹಳೇ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಶ್ರೀಯುತ ಪುನೀತ್ ಕೆರೆಹಳ್ಳಿ ಭಾಗವಹಿಸಲಿದ್ದು ಸಮಸ್ತ ಹಿಂದೂ ಸಮಾಜ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಸಂಚಾಲಕ್ ಶಿವು ಜಿಪ್ಪಿ ಮನವಿ ಮಾಡಿದ್ದಾರೆ.
