ಹಾಸನ ಜಿಲ್ಲೆಗೆ ರಾಷ್ಟ ರಕ್ಷಣಾ ಸೇನೆಯ ಮುಖಂಡರಾದ ಪುನೀತ್ ಕೆರೆ ಹಳ್ಳಿಯವರಿಗೆ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯ ಆಗಿದೆ.
ಇಂದು ಸಕಲೇಶಪುರದಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಲಿತ್ತು.
ಪುನೀತ್ ಕೆರೆಹಳ್ಳಿಯವರು ಭಾಷಣದಲ್ಲಿ ದ್ವೇಷ ಭಾವನೆ ಮೂಡಿಸುತ್ತಾರೆ ಎಂಬ ಆರೋಪ ನೀಡಿ ಅವರಿಗೆ ಈ ಕಾರ್ಯಕ್ರಮಕ್ಕೆ ಬರಲು ಅನುಮತಿ ನೀಡಿಲ್ಲ ಎನ್ನಲಾಗಿದೆ.
