ವರದಿ: ನವೀನ್ ಬೈರಾ ಪುರ
ಆಲೂರು : ತಾಲ್ಲೂಕು “ಬಹುಜನ ಸಮಾಜ ಪಾರ್ಟಿ” ಯ ನೂತನ ಅದ್ಯಕ್ಷರಾಗಿ ಮಂಜುನಾಥ ಮರಸು ಹೊಸಹಳ್ಳಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ನೇತೃತ್ವದಲ್ಲಿ ಈ ತಾಲ್ಲೂಕು ಕಾರ್ಯಕರ್ತರ ಸಭೆಯಲ್ಲಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಂಜುನಾಥ್ ಮರಸು ಹೊಸಹಳ್ಳಿ, ತಾಲೂಕು ಸಂಯೋಜಕರಾಗಿ ರಘು ಅಬ್ಬನ, – ಉಪಾಧ್ಯಕ್ಷ ರಾಗಿ ಶಿವಣ್ಣ ಬೆಳ್ಳಾವರ ಮತ್ತು ಪೀಟರ್ ರಾಜೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಮುದಿಗೆರೆ, ಖಜಾಂಚಿ ಯಾಗಿ ಸ್ವಾಮಿ ಗೇಕರವಳ್ಳಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಿಎಸ್ಪಿ ಜಿಲ್ಲಾ ಉಸ್ತುವಾರಿ ಹೆಚ್. ಬಿ. ಮಲ್ಲಯ್ಯ, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ಕೀರ್ತಿ, ಜಿಲ್ಲಾ ಕಛೇರಿ ಕಾರ್ಯದರ್ಶಿ ಕಿರಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ರಾಜು ಬ್ಯಾಬ, ಸಕಲೇಶಪುರ ತಾಲ್ಲೂಕು ಅದ್ಯಕ್ಷ ವೀರೇಶ್ ಕಲ್ಗಣೆ ಸೇರಿದಂತೆ ಬಿಎಸ್ಪಿ ಕಾರ್ಯಕರ್ತರು ಇದ್ದರು.
