ಈ ಸಕಲೇಶಪುರ ಹಾಗೂ ಮಲೆನಾಡ ಗ್ರಾಮೀಣ ರೈತರ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿದೆ ಎಂದರೆ ವಿಮರ್ಶೆ ಮಾಡಲು ಕೂಡಾ ಅಸಾಧ್ಯ ಎಂಬಂತೆ ಆಗಿದೆ.
ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳು ಪ್ರತಿ ನಿತ್ಯ ಒಂದೊಂದು ಗ್ರಾಮಕ್ಕೆ ಹೋಗಿ ಆನೆಗಳ ಬಗ್ಗೆ ಮಾಹಿತಿ ನೀಡುವಷ್ಟರ ಮಟ್ಟಿಗೆ ಸಾಗಿದೆ.
ಅರಣ್ಯ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಆದರೆ ಆನೆಗಳ ಸಂಖ್ಯೆ ಮಾತ್ರ ಪ್ರತಿ ನಿತ್ಯ ಏರುತ್ತಲೇ ಸಾಗುತ್ತಿರುವುದು ಆತಂಕ ತರುವ ವಿಚಾರ ಆಗಿದೆ.
ಒಂಟಿ ಕಾಡನೆ, ಗುಂಪು ಕಾಡಾನೆ ಹೀಗೆ ಎಲ್ಲಾ ಕಾಡಾನೆ ಸಂಚಾರದಲ್ಲಿ ಕೂಡ ಆತಂಕ ಮಾತ್ರ ಗ್ರಾಮೀಣ ರೈತರಿಗೆ.
ಒಂಟಿ ಕಾಡಾನೆ ಇದ್ರೆ ಜೀವಕ್ಕೆ ಹಾನಿ, ಗುಂಪು ಕಾಡಾನೆ ಇದ್ರೆ ಕೃಷಿಗೆ ಹಾನಿ ಎಂಬಂತೆ ಆಗಿದೆ.
ಅಂತೂ ಜೀವ ಹಾನಿ ಮಾತ್ರ ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ.
ರೈತರೇ ಒಮ್ಮೆ ಅವಲೋಕನ ಮಾಡಿ
ಎಲ್ಲಾ ರೈತ ಬಂಧುಗಳೇ, ಒಮ್ಮೆ ಅವಲೋಕನ ಮಾಡಿ ಕಳೆದ 3 ವರ್ಷಗಳ ಹಿಂದೆ ಇದ್ದ ಆನೆ ಸಂಖ್ಯೆ ಎಷ್ಟು ಈಗ ಇರುವ ಆನೆ ಸಂಖ್ಯೆ ಎಷ್ಟು. ಒಮ್ಮೆ ಅವಲೋಕನ ಮಾಡಿ.
ಆನೆ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಅವುಗಳಿಗೆ ಹೊಟ್ಟೆಗೆ ಮಾತ್ರ ರೈತ ಬೆಳೆದ ಕೃಷಿಯೇ ಪ್ರಧಾನ. ಏನೂ ಸಿಕ್ಕದಾಗ ಮಾನವ ಜೀವ ಹಾನಿ ಮಾಡಿಯೇ ಬಿಡುತ್ತದೆ.
ಬಹಳ ಜಾಗ್ರತೆಯಿಂದ ಬದುಕು ಕಟ್ಟಿ ಕೊಳ್ಳಬೇಕಿದೆ
