*ಗಾನ ಸಂಗಮ ಗಾಯನೋತ್ಸವ ಕಾರ್ಯಕ್ರಮ*
*ಸಕಲೇಶಪುರ :ಗಾನ ಕೋಗಿಲೆ ಕುಟುಂಬ ಸಕಲೇಶಪುರ ಇವರ ವತಿಯಿಂದ ಗಾಯಕ ರಮೇಶ್ ರಾವ್ ಹಾಗೂ ಸುಜಾತ ರಾವ್ ರವರು ಅರ್ಪಿಸುವ ಗಾನ ಸಂಗಮ ಗಾಯನೋತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆಚ್. ಕೆ. ಕುಮಾರಸ್ವಾಮಿ ರವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು*. *ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಬಾಚಳ್ಳಿ ಪ್ರತಾಪ್ ಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾನಂದ್ , ಕಿರಣ್ ಚಂದ್ರ, ಆನಂದ್ ಹಾಗೂ ಮುಂತಾದ ಕಲಾವಿದರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು*.
