ಆಟೋ ಚಾಲಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆಯನ್ನು ವಿರೋಧಿಸಿ ಆಟೋ ಚಾಲಕರು ಪೊಲೀಸ್ ಠಾಣೆಯ ಬಳಿ ಸೇರಿ ಮನವಿ ಮಾಡುವ ಜೊತೆಗೆ ಮಾತಿನ ಚಕಮಕಿ ಆಗಿರುವ ಬಗ್ಗೆ ವರದಿ ಆಗಿದೆ.
ಸಕಲೇಶಪುರ ನಗರದಲ್ಲಿ ಎರಡು ದಿನಗಳ ಹಿಂದೆ ಆಟೋ ಚಾಲಕರೋರ್ವರ ಮೇಲೆ ಹಲ್ಲೆ ಮಾಡಲಾಗಿತ್ತು.
ಈ ವಿಚಾರವಾಗಿ ಸಕಲೇಶಪುರ ಪೊಲೀಸ್ ಠಾಣೆ ಆವರಣದಲ್ಲಿ ಇಂದು ಆಟೋ ಚಾಲಕರು ಸೇರಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರ ಮತ್ತು ಆಟೋ ಚಾಲಕರ ಮದ್ಯೆ ಬಹಳ ಹೊತ್ತು ಮಾತಿನ ಚಕಮಕಿ ನಡೆಯಿತು. ಸಕಲೇಶಪುರ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಅವರು ಆಟೋ ಚಾಲಕರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.
