ಯುವಕರು ಮದ್ಯ-ಮಾದಕ ವಸ್ತುವಿನಿಂದ ದೂರವಿರಿ: ತಹಸೀಲ್ದಾರ್ ಮಲ್ಲಿಕಾರ್ಜುನ್
ಆಲೂರು: ಸಂತೋಷ ಹಾಗೂ ದುಃಖದ ವಿಚಾರದಲ್ಲಿ ಮದ್ಯ ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರ ಸಹಿತ ಜನರು ಭವಿಷ್ಯ ಕಳೆದುಕೊಳ್ಳುತ್ತಿದ್ದು, ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಮೂಲಕ ದುಶ್ಚಟಗಳನ್ನು ತೊರೆದು ಸ್ವಸ್ಥ ಸಮಾಜ ಕಟ್ಟುವಲ್ಲಿ ಜೊತೆಗೂಡ ಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ 1964 ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವ್ಯಸನವೆಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ. ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತಕ್ಕೆ ದಾಸರಾಗುವುದ ರಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದ
ರೊಂದಿಗೆ ಘನತೆ ಗೌರವಕ್ಕೆ ಕುಂದು ಬರುತ್ತದೆ. ಕುಡಿತ ಬಿಟ್ಟು ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶ್ರಮ ವಹಿಸಿಕೊಂಡು ಜಾಗರೂಕತೆಯಿಂದ ಜೀವನ ನಡೆಸಬೇಕು. ವ್ಯಸನಿಗಳ ಸಂಕಲಕ್ಕೆ ಪ್ರೇರಣೆ ಕೊಡುವುದೇ ಈ ಮದ್ಯವರ್ಜನ ಶಿಬಿರದ ಉದ್ದೇಶ ಎಂದರು.
ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾಪ್ರಸಾದ್ ಮಾತನಾಡಿ, ಮದ್ಯ
ಸೇವನೆಯಿಂದ ಕುಟುಂಬಗಳು ನಾಶವಾಗಿ ರುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಗಲಿದ್ದು, ಮದ್ಯವ್ಯಸನಿಗಳು ಇತ್ತ ಮದ್ಯ ಸೇವನೆ ಚಟ ಬಿಡಲಾರದೆ, ಅತ್ತ ಕುಟುಂಬಗಳೊಂದಿಗೆ ನೆಮ್ಮದಿಯ ಜೀವನ ನಡೆಸಲಾಗದೆ ಸಮಾಜ ದಲ್ಲಿ ಸತ್ಪಜೆಯಾಗದಿರುವ ಸಂದರ್ಭ ದಲ್ಲಿ ಇಂತಹ ಮದ್ಯವರ್ಜನ ಶಿಬಿರ ಆಯೋಜನೆ ಯಿಂದ ಹಲವಾರು ಮದ್ಯ ವ್ಯಸನಿಗಳು
ಪರಿವರ್ತನೆಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ತಾಪಂ ಇಒ ಸುಬ್ರಮಣ್ಯ ಶರ್ಮ ಮಾತ ನಾಡಿ, ಯುವಜನರು ಮದ್ಯ ಹಾಗೂ ಮಾದಕ ವಸ್ತುಗಳಿಗೆ ದಾಸರಾದಲ್ಲಿ ಭವಿಷ್ಯವನ್ನು ಕಳೆದು ಕೊಳ್ಳಬೇಕಾಗುತ್ತದೆ. ಆದ್ದರಿಂದ ಮದ್ಯ ಹಾಗೂ ಮಾದಕ ವಸ್ತುಗಳ ಬಗ್ಗೆ ಯೋಚಿಸಲೇ ಬಾರದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಒಂದು ಕಡೆ ಜಾಗೃತಿ ಮೂಡಿಸುತ್ತದೆ. ಮತ್ತೊಂದು ಕಡೆ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತದೆ. ಹಾಗೆಯೇ ಖಚಿತವಾದಲ್ಲಿ ದಂಡ ವಿಧಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿ ಕಾರಿ ಅಧಿಕಾರಿ ನಿಸಾರ್ ಫಾತಿಮಾ, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ತಾಲ್ಲೂಕು ವೀರಶೈವ ಸಂಘದ ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಸಹ ಕಾರ್ಯದರ್ಶಿ ಡಾ. ಜಯರಾಜ್ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮು ಕೇಶ್, ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುರಾದ ಹೆಚ್. ಬಿ.ಧರ್ಮರಾಜು, ಮಲ್ಲಿಕಾರ್ಜುನ, ಮೋಹನ್ ಮಾವನೂರು, ಎಂ.ಬಾಲಕೃಷ್ಣ, ಎಂ.ಕೆ ರಾಜಶೇಖರ್ ಮರಸು, ತಾಲೂಕಿನ ಯೋಜನಾಧಿಕಾರಿ ರತ್ನಾಕರ್ ಕೊಟರಿ, ಎ.ಎಸ್.ಐ.ದೇವರಾಜು, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಆನಂದ್, ಕರವೇ ತಾಲೂಕು ಉಪಾಧ್ಯಕ್ಷ ನವೀನ್ ಸೇರಿದಂತೆ ಮುಂತಾದವರು ಇದ್ದರು.
