ದೋಣಿಗಾಲ್ ನಿಂದ ಕ್ಯಾನಹಳ್ಳಿ ಹೋಗುವ ರಸ್ತೆಯಲ್ಲಿ ಹೊಸ್ಕೆರೆ ಬಳಿ 1 ತಿಂಗಳ ಹಿಂದೆ ಮಳೆ ಹಾಗೂ ಗಾಳಿಯಿಂದ ರಸ್ತೆಯ ಮೇಲೆ ಬಿದ್ದ ಎರಡು ದೊಡ್ಡ ಮರಗಳನ್ನು ಕಡಿದು ರಸ್ತೆ ಬದಿಯಲ್ಲಿ ಹಾಗೆಯೇ ಬಿಟ್ಟಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಹಲವಾರು ಶಾಲಾವಾಹನಗಳು ಕೂಡ ತಿರುಗುವುದರಿಂದ ಎದುರು ಬದಿಯಿಂದ ಬರುವ ವಾಹನಗಳಿಗೆ ದಾರಿಕೊಡಲು ಸಮಸ್ಯೆಯಾಗುತ್ತಿದೆ•ಇದರಿಂದ ಅಪಘಾತವಾಗುವ ಸಂಭವ ಕೂಡ ಹೆಚ್ಚಾಗಿರುವುದರಿಂದ ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಕೂಡಲೇ ಈ ರಸ್ತೆ ಬದಿಯಿರುವ ಬಿದ್ದಿರುವ ಮರಗಳನ್ನು ತೆರವುಗೊಳಿಸ ಬೇಕಾಗಿ ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿಯವರು ಆಗ್ರಹಿಸಿದ್ದಾರೆ.
ಇದರಿಂದ ಯಾವುದೇ ಅಪಘಾತವಾದರೂ ಅರಣ್ಯಾಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆಂದು ಎಚ್ಚರಿಸಿದ್ದಾರೆ.



