ಜಿಮ್ ಸೋಮ ಎಂದೇ ಖ್ಯಾತಿ ಪಡೆದಿದ್ದ ಸಕಲೇಶಪುರ ಬೆಳಗೋಡು ನಿವಾಸಿ ಸೋಮಶೇಖರ್ ರವರು ಉಸಿರಾಟದ ತೊಂದರೆಯಿಂದ ಮೃತ ಪಟ್ಟಿದ್ದಾರೆ.
ಬಾಡಿ ಬಿಲ್ಡಿಂಗ್ನಲ್ಲಿ ಅಪಾರ ಸಾಧನೆ ಮಾಡಿದ್ದ ಅವರಿಗೆ ನಿನ್ನೆ ರಾತ್ರಿ ತೀವ್ರ ಉಸಿರಾಟ ತೊಂದರೆ ಕಾಣಿಸಿ ಕೊಂಡು ಬಳಿಕ ಮೃತ ಪಟ್ಟಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 30 ವರ್ಷ ವಯಸ್ಸು ಆಗಿತ್ತು. ಕಟ್ಟು ಮಸ್ತಾದ ದೇಹವನ್ನು ಹೊಂದಿದ್ದ ಅವರು ರಾಷ್ಟ್ರ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್ ಗೆ ತನ್ನನ್ನು ತೊಡಗಿಸಿ ಕೊಂಡಿದ್ದರು. ಆದರೆ ಅಷ್ಟರಲ್ಲಿ ಮೃತ್ಯು ಅವರನ್ನ ಕರೆ ದೋಯ್ದಿದೆ.
ಅವರು ಹಾಸನದಲ್ಲಿ ಸ್ವಂತ ಜಿಮ್ ತರಗತಿ ನಡೆಸುತ್ತಿದ್ದರು. ಅವಿವಾಹಿತರಾಗಿದ್ದ ಅವರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ
