ಸಕಲೇಶಪುರದ ಮಂಜರಾಬಾದ್ ಕೋಟೆಗೆ ಈ ಬಾರಿಯ ಮಳೆಗಾಲ ಆತಂಕ ತಂದಿದೆ.
ಕೋಟೆಯಲ್ಲಿ ಅಂದಿನ ದಿನಗಳಲ್ಲಿ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾದ ಕೋಟೆಯ ಒಂದು ಭಾಗ ಕುಸಿದು ಬಿದ್ದಿದೆ.
ಸಕಲೇಶಪುರದಲ್ಲಿ ಅತೀ ಎತ್ತರದ ಪ್ರದೇಶದಲ್ಲಿರುವ ಈ ಕೋಟೆ ಪ್ರವಾಸಿಗರ ಆಕರ್ಷಣೆಯಾಗಿದೆ.
ಈ ಕೋಟೆಯನ್ನು ವೀಕ್ಷಣೆ ಮಾಡಲು ಸಾವಿರಾರು ಮಂದಿ ಬರುತ್ತಾರೆ.