ಸಕಲೇಶಪುರ ತಾಲೂಕಿನಲ್ಲಿರುವ ವಿಶ್ವ ಪ್ರಖ್ಯಾತ ಮಂಜರಾಬಾದ್ ಕೋಟೆಯ ಒಂದು ಭಾಗ ಅತಿಯಾದ ಮಳೆಯಿಂದಾಗಿ ಕುಸಿತ ಉಂಟಾಗಿರುವ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿದ್ದಾರೆ.
ಕೋಟೆಯ ಹಲವು ಭಾಗಗಳು ಶಿಥಿಲವಾಗಿದ್ದು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶಾಸಕರು ಸೂಚನೆ ನೀಡಿದರು
ಮಂಜರಾ ಬಾದ್ ಕೋಟೆಗೆ ಪ್ರವಾಸಿಗರು ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದಕೂಡಲೇ ಸರಿ ಪಡಿಸುವ ನಿರ್ಧಾರವನ್ನು ಶಾಸಕರು ತಿಳಿಸಿದ್ದಾರೆ.


