ಶ್ರೀ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಕಲೇಶಪುರ .ಶ್ರಾವಣ ಮಾಸದ ಮೊದಲನೇ ಸೋಮವಾರದ ಪ್ರಯುಕ್ತ ದಿನಾಂಕ 28.07.2025 ರಂದು ಬೆಳಿಗ್ಗೆ 9 ರಿಂದ ಸ್ವಾಮಿ ಅವರಿಗೆ ಸಾವಿರದ ಎಂಟು
ಎಳನೀರಿನ ಅಭಿಷೇಕ ಹಾಗೂ 12:30 ರಿಂದ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ತಿಳಿಸಲಾಗಿದೆ.
ಸಂಜೆ 7 ರಿಂದ ಭಜನೆ ಹಾಗೂ ಸ್ವಾಮಿ ಅವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ 8.30 ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ಹೊಳೆ ಮಲ್ಲೇಶ್ವರ ಸ್ವಾಮಿ ಟ್ರಸ್ಟ್. ಹೊಳೆ ಮಲ್ಲೇಶ್ವರ ಮಹಿಳಾ ಮಂಡಳಿ.. ಸಕಲೇಶಪುರ ತಿಳಿಸಿದೆ.
