ವರದಿ : ನವೀನ್ ಬೈರಾಪುರ
ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಿಂದ ಬೈರಾಪುರಕ್ಕೆ ಹೋಗುವ ರಸ್ತೆ ಗುಂಡಿಮಯವಾಗಿದ್ದು ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸೂರು ಗ್ರಾಮದಿಂದ ಬೈರಾಪುರ ಹಾಗೂ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ ಸುರಿಯುತ್ತಿರುವ ಮಳೆಗೆ ನೀರು ನಿಂತಿದ್ದು ಈ ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಾರೆ ವಾಹನ ಸವಾರರು,ಶಾಲಾ ಮಕ್ಕಳು,ಸಾರ್ವಜನಿಕರು ಬಿದ್ದು ಗಾಯಗೊಂಡಿದ್ದಾರೆ ಈ ಬಗ್ಗೆ ಹಲವಾರು ವರ್ಷಗಳಿಂದ ಈ ಸಂಬಂಧಪಟ್ಟ ಅಧಿಕಾರಿಗಳು.ಜನಪ್ರತಿನಿದಿನಗಳ ಗಮನಕ್ಕೆ ತರಲಾಗಿದೆ ಈ ರಸ್ತೆ
ದುರಸ್ಥಿ ಕಂಡು ಸುಮಾರು ಮೂವತ್ತೈದು ವರ್ಷಗಳೇ ಕಳೆದಿವೆ.
ಆಡಳಿತ ಮಂಡಳಿ ಪ್ರಯತ್ನ ಮಾಡಿಲ್ಲ ರಸ್ತೆಗೂ ನಮಗೂ ಸಂಬಂಧ ಇಲ್ಲಾ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೈರಾಪುರ ಗ್ರಾಮ ಪಂಚಾಯಿತಿಗೆ ಹಲವು ವರ್ಷಗಳಿಂದ ರಸ್ತೆ ದುರಸ್ಥಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಾ ಬಂದಿದ್ದು ಇದುವರೆಗೂ ತಿರುಗಿ ನೋಡಿಲ್ಲ
ಕೆಲವು ಕಿಡಿಗೇಡಿಗಳು ಕಷ್ಟಪಟ್ಟು ದುಡಿದು ಬಾಳದೆ ಹಣ ಮಾಡುವ ದೃಷ್ಟಿಯಿಂದ ಬೈರಾಪುರ ಪಂಚಾಯತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಇಲ್ಲದ ಸಲ್ಲದ ಅರ್ಜಿಗಳನ್ನು ನೀಡಿ ಕಳೆದ ನಾಲ್ಕು ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗಿದ್ದಲ್ಲದೆ ಮತ್ತು ಪಂಚಾಯತಿಯ ಅಧಿಕಾರಿಗಳು ಕಿತ್ತಾಟದಲ್ಲಿ ತೊಡಗಿದ್ದಾರೆ ಆಡಳಿತ ಮಂಡಳಿ ಸಂಪೂರ್ಣ ನಿಷ್ಕ್ರಿಯವಾಗಿದೆ ಆದ್ದರಿಂದ ಶಾಸಕರು.ಸಂಸದರು ಯಾವುದೇ ಭೇದಭಾವ ಮಾಡದೆ ನಮ್ಮ ಊರಿನ ರಸ್ತೆಯನ್ನು ಸರಿಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸಂಜು ಹಾಗೂ ಹೊಸೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಊರಿನ ರಸ್ತೆ ಆಗದೆ ಹೋದರೆ ಮತಬಹಿಷ್ಕಾರ ಹಾಗು ಗ್ರಾಮ ಪಂಚಾಯಿತಿಗೆ ಬಂದು ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
