ಸಕಲೇಶಪುರ ವಿಧಾನಸಭಾ ಕ್ಷೇತ್ರ (ಆಲೂರು ಕಟ್ಟಾಯ ಸಕಲೇಶಪುರ)ದ ಕಾಂಗ್ರೆಸ್ ಮುಖಂಡರು ಮತ್ತು ಜನಪ್ರಿಯ ನಾಯಕರು ಆದಂತಹ ಮುರಳಿ ಮೋಹನ್ ರವರ 43ನೇ ಹುಟ್ಟುಹಬ್ಬವನ್ನು ಗಣಪಯ್ಯ ರೋಟರಿ ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಕೌಡಳ್ಳಿ ಇಲ್ಲಿ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳಿ ಮೋಹನ್ ರವರು ಮಕ್ಕಳೊಂದಿಗೆ ಕೆಲವು ಗಟ್ಟಿಗಳ ಕಾಲವನ್ನು ಕಳೆದು ತಮ್ಮ ಈ ವರ್ಷದ ಹುಟ್ಟುಹಬ್ಬ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ಹುಟ್ಟುಹಬ್ಬ ವಾಗಿರುತ್ತದೆ ಎಂದರು.
ನನ್ನ ಜೀವನದಲ್ಲಿ ಅತ್ಯಂತ ಸಂತೋಷವಾಗಿ ಇರುವಂತಹ ದಿನ ಈ ಮಕ್ಕಳೊಂದಿಗೆ ಇರುವ ಸಮಯವಾಗಿದೆ ಎಂದು ಶ್ರೀಯುತರು ತಿಳಿಸಿದರು ಇವರೊಂದಿಗೆ ಇವರ ಶ್ರೀಮತಿ ನಂದಿನಿ ಮುರಳಿ ಮೋಹನ್ ರವರು ಮತ್ತು ತಾಲ್ಲೂಕಿನ ಅವರ ಸ್ನೇಹಿತರು ಹಿತೈಷಿಗಳು ಉಪಸ್ಥಿತರಿದ್ದರು
ನಂತರ ಹುಟ್ಟು ಹಬ್ಬದ ನೆನಪಿಗಾಗಿ ಶಾಲೆಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಕೆಲವೊಂದು ಉಪಕರಣಗಳನ್ನು ಸಂಸ್ಥೆಗೆ ಉಡುಗರೆಯಾಗಿ ನೀಡಿ ಸಂಸ್ಥೆಗೆ ಬೇಕಾಗಿರುವಂತಹ ಎಲ್ಲಾ ಕೆಲಸವನ್ನ ಮಾಡಿಸಿಕೊಡುವುದಾಗಿ ತಿಳಿಸಿದರು
