ಸಕಲೇಶಪುರ: ಅಕ್ರಮ ಮರ ಸಾಗಾಟ ಪ್ರಕರಣದಲ್ಲಿ ಚುರುಕು ಮುಟ್ಟಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಸಕಲೇಶಪುರ ಎಡೆ ಹಳ್ಳಿ ಬಳಿ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ವಾಹನ ಸಮೇತ ಮರದ ದಿಮ್ಮಿಯನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಿಲೆಟ್ಸ್ ಜಾತಿಯ ಮರಗಳು ಹಾಗೂ ಈ ಮರಗಳನ್ನು ಸಾಗಾಟ ಮಾಡಿದ ಅಕ್ರಮ ಸಾಗಾಟದಲ್ಲಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಮಂಜುನಾಥ್, ಮಹಾದೇವಪ್ಪ, ಲೋಕೇಶ್, ಜೈ ಸ್ವಾಮಿ ಭಾಗವಹಿಸಿದ್ದರು.
