ವರದಿ: ನವೀನ್ ಬೈರಾ ಪುರ
ಆಲೂರು. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 3ರ ರಸ್ತೆ ಮಳೆಯಿಂದ ಹಾಳಾಗಿದೆ.
ಈ ಬಾರಿಯ ಮಳೆಗಾಲ ದಲ್ಲಿ ಪ್ರತಿ ದಿನ ಹೆಚ್ಚು ಮಳೆ ಸುರಿಯುತ್ತಿದೆ.
ವಿಪರೀತ ಮಳೆ ಹಾಗೂ ವಾಹನ ಸಂಚಾರದಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿ ಕೊಡಬೇಕಾಗಿ ಸ್ಥಳೀಯರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
